ಬೆಂಗಳೂರು: ಪ್ರಧಾನಿ ಮೋದಿ, ಬಿಜೆಪಿ, ಹಿಂದುತ್ವ, ಹಿಂದೂಗಳನ್ನು ಗುರಿಯಾಗಿಸಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಹಾಗೂ ಟೀಕೆಗೆ ಒಳಗಾಗುತ್ತಿರುವ ನಟ ಪ್ರಕಾಶ್ ರೈ ಇದೀಗ ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ್ದಾರೆ.
ಒಂದು ಹಳೆಯ ಪತ್ರಿಕೆಯ ಸುದ್ದಿ ತುಣುಕನ್ನು ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಪ್ರಕಾಶ್ ರೈ, ಡಿಮಾನಿಟೈಸೇಷನ್ ಬಗ್ಗೆ ಟೀಕಿಸಿ ಪೋಸ್ಟ್ ಮಾಡಿದ್ದಾರೆ. ಈ ನಾಟಕೀಯ ದಿನದ ಕುರಿತು ನಿಮಗೆ ನೆನಪಿದ್ದರೆ ಲೈಕ್ ಮಾಡಿ, ರಿಪೋಸ್ಟ್ ಮಾಡಿ ಎಂದೂ ಕೇಳಿಕೊಂಡಿದ್ದಾರೆ.
ಪೋಸ್ಟರ್ ನಲ್ಲಿ, 2016ರ ನ. 8ರಂದು ಡಿಮಾನಿಟೈಸೇಷನ್ ಘೋಷಣೆ ಮಾಡಿದ ಬಳಿಕ ಆದ ಅನನುಕೂಲ-ಅವಾಂತರಗಳ ಬಳಿಕ ಪ್ರಧಾನಿ ಮೋದಿ ಒಮ್ಮೆ ಗದ್ಗದಿತರಾಗಿ ಮಾತನಾಡಿದ್ದು ದೊಡ್ಡ ಸುದ್ದಿಯಾಗಿತ್ತು. ನನಗೆ 50 ದಿನಗಳ ಸಮಯ ಕೊಡಿ, ನನ್ನದು ತಪ್ಪಾಗಿದ್ದರೆ ನನ್ನನ್ನು ಜೀವಂತ ಸುಟ್ಟುಬಿಡಿ ಎಂದು ಮೋದಿ ಹೇಳಿದ್ದು ಪತ್ರಿಕೆಯೊಂದರಲ್ಲಿ ಮುದ್ರಿತಗೊಂಡಿತ್ತು.
Share and retweet if you remember .. a #Nautanki s quote on this #ChipAnniversaryDay #DemonetisationDisaster #justasking pic.twitter.com/tvqALRLC2X
— Prakash Raj (@prakashraaj) November 8, 2023