News Karnataka Kannada
Monday, May 06 2024
ಬೆಂಗಳೂರು

ಐಟಿ ದಾಳಿ ವೇಳೆ ಮಂಚದ ಕೆಳಗೆ ಇತ್ತು ಕಂತೆ ಕಂತೆ ನೋಟುಗಳ ಕಟ್ಟು

A bundle of notes was lying under the bed during the I-T raids
Photo Credit : News Kannada

ಬೆಂಗಳೂರು: ನಗರದ ಬಿಲ್ಡರ್, ಕಾಂಟ್ರ್ಯಾಕ್ಟರ್ ಅಂಬಿಕಾಪತಿ ಹಾಗೂ ಇವರ ಪತ್ನಿ ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ನಿವಾಸದ ಮೇಲೆ ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇವರಿಗೆ ಸಂಬಂಧಿಸಿದಂತೆ ನಗರದ ಐದಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಶೋಧಕಾರ್ಯ ಮುಂದುವರಿಸಿದ್ದಾರೆ.

ಇವರ ಸಂಬಂಧಿ ಪ್ರದೀಪ್​ ಅನ್ನೋರಿಗೆ ಸೇರಿದ್ದ ಫ್ಲ್ಯಾಟ್ ಒಂದರಲ್ಲಿ ಕಂತೆ ಕಂತೆ ನೋಟುಗಳಲ್ಲಿ ಇಡಲಾಗಿದ್ದ 42 ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪತ್ತೆಯಾದ ಒಟ್ಟು ಮೊತ್ತವನ್ನು ಅಧಿಕಾರಿಗಳು ಎಣಿಕೆ ಮಾಡಿದ್ದಾರೆ.

ಅಂಬಿಕಾಪತಿಗೆ ಸಂಬಂಧ ಪಟ್ಟ ಬ್ಯಾಂಕ್ ಅಕೌಂಟ್​ಗಳು ಮತ್ತು ಬ್ಯಾಂಕ್ ಲಾಕರ್​ಗಳ ಬಗ್ಗೆ ಮಾಹಿತಿ ಸಂಗ್ರಹ‌ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು