News Karnataka Kannada
Thursday, May 16 2024
ಬೆಂಗಳೂರು

ಸಿಲಿಂಡರ್‌ ಬೆಲೆ ಹೆಚ್ಚಳ ಹಿನ್ನೆಲೆ, ಜನವರಿ  ವೇಳೆಗೆ ಊಟ, ತಿಂಡಿಯ ಬೆಲೆ  ಏರಿಸುವ ಚಿಂತನೆ ನಡೆಸಿದ ಹೋಟಲ್‌ಗಳ ಸಂಘ

Bengaluru: A cylinder for commercial use will be reduced to a small extent from today
Photo Credit :

ಬೆಂಗಳೂರು ನ.03 : ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ದಿಢೀರ್‌  ಹೆಚ್ಚಳವಾದ ಹಿನ್ನೆಲೆಯಲ್ಲಿ ಬರುವ ಜನವರಿ  ವೇಳೆಗೆ ಊಟ, ತಿಂಡಿಯ ಬೆಲೆ  ಏರಿಸುವ ಕುರಿತು ತೀರ್ಮಾನಿಸಲಿದ್ದೇವೆ ಎಂದು ಬೃಹತ್‌ ಬೆಂಗಳೂರು ಹೋಟಲ್‌ಗಳ ಸಂಘ  ಅಧ್ಯಕ್ಷ ಪಿ.ಸಿ ರಾವ್‌ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, 1,794 ರು.ಗೆ ಸಿಗುತ್ತಿದ್ದ 19 ಕೆ.ಜಿ. ತೂಕದ ಒಂದು ವಾಣಿಜ್ಯ ಸಿಲಿಂಡರ್‌ನ ಬೆಲೆ ಇದೀಗ 2060 ರು.ಗೆ ಏರಿಕೆಯಾಗಿದೆ. ಇದು ಕೊರೋನಾ  ಲಾಕ್‌ಡೌನ್‌ನಿಂದ  ಸಂಕಷ್ಟದಲ್ಲಿದ್ದ ಹೋಟಲ್‌ ಉದ್ಯಮವನ್ನು ಮತ್ತಷ್ಟುಆರ್ಥಿಕ ನಷ್ಟಕ್ಕೆ ತಳ್ಳಲಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ  ತೈಲ ಬೆಲೆ ಏರಿಕೆ ನಿಯಂತ್ರಿಸುವಂತೆ ಸಂಘದಿಂದ ಮನವಿ ಮಾಡಿದ್ದೇವೆ ಎಂದರು.

ಮುಂದಿನ ವಾರ ಮತ್ತೊಮ್ಮೆ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಕಾದು ನೋಡುತ್ತೇವೆ. ಜನವರಿ ವೇಳೆಗೆ ಇಂಧನ, ಸಿಲೆಂಡರ್‌ ದರ ಹತೋಟಿಗೆ ಬಾರದಿದ್ದರೆ ಸಂಘದ ಸದಸ್ಯರ ಜತೆ ಚರ್ಚಿಸಿ ನಂತರ ಊಟ, ತಿಂಡಿ ಬೆಲೆ ಏರಿಸುತ್ತೇವೆ. ಸದ್ಯಕ್ಕೆ ಬೆಲೆ ಏರಿಸುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂಧನ ಬೆಲೆ ಹೆಚ್ಚಾಗಿದ್ದರಿಂದ ಕಳೆದ ಕೆಲ ತಿಂಗಳಿಂದ ದಿನಸಿ, ತರಕಾರಿ, ಅಡುಗೆ ಅನಿಲ ಸೇರಿದಂತೆ ಅನೇಕ ವಸ್ತುಗಳ ದರ ಏರಿದೆ. ಈಗ ವಾಣಿಜ್ಯ ಸಿಲಿಂಡರ್‌ ದರ ಹೆಚ್ಚಿಸುತ್ತಿದ್ದಂತೆ ಊಟ, ತಿಂಡಿ ಬೆಲೆ ಏರಿಕೆ ಮಾಡಿದರೆ ಹೋಟಲ್‌ಗಳಿಗೆ ಬರುವ ಗ್ರಾಹಕರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯೂ ಇದೆ. ಸಂಕಷ್ಟದಲ್ಲಿರುವ ಉದ್ಯಮ ಆಗ ಮತ್ತಷ್ಟುನಷ್ಟಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು