ರಾಜ್ಯ ರಾಜಕಾರಣದಲ್ಲಿ ತಾಲಿಬಾನ್ ಪದ ಹೆಚ್ಚಾಗಿಯೇ ಬಳಕೆಗೆ ಬಂದಿದೆ. ಮಾಡುತ್ತಿರುವ ಪ್ರತಿ ಆರೋಪ – ಪ್ರತ್ಯಾರೋಪದಲ್ಲಿಯೂ ತಾಲಿಬಾನಿಗಳ ಹೆಸರು ಬರುತ್ತಿದ್ದು, ಈ ಬಗ್ಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ತಾಲಿಬಾನಿ ಎಂಬ ಪದ ರಾಜಕೀಯವಾಗಿ ತೀವ್ರ ಬಳಕೆಯಾಗುತ್ತಿರುವುದನ್ನು ಕಂಡು ಅಫ್ಘಾನಿಸ್ತಾನದ ಮೂಲ ತಾಲಿಬಾನಿಗಳಿಗೆ ಅಸಮಾಧಾನವಾದರೆ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಆರ್ಎಸ್ಎಸ್ ಸಂಘಟನೆಗಳನ್ನು ತಾಲಿಬಾನ್ಗೆ ಹೋಲಿಸಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾತನಾಡಿದ್ದು, ಬಿಜೆಪಿ ಮುಖಂಡರು ಇದನ್ನು ವಿರೋಧಿಸಿದ್ದಾರೆ.