News Karnataka Kannada
Friday, May 03 2024
ಬೆಂಗಳೂರು

ರಾಜ್ಯದಲ್ಲಿ ಕೋವಿಡ್ ಡೆಲ್ಟಾ ರೂಪಾಂತರದ 16 ಉಪ ತಳಿಗಳು ಪತ್ತೆ

Delta Virus 8 7 21
Photo Credit :

ಬೆಂಗಳೂರು: ಕೋವಿಡ್‌–19 ಡೆಲ್ಟಾ ರೂಪಾಂತರವು ಜಗತ್ತಿನಾದ್ಯಂತ 32 ಉಪ ರೂಪಾಂತರಗಳನ್ನು ಹೊಂದಿದ್ದು, ಈ ಪೈಕಿ 16 ಉಪ ತಳಿಗಳು ರಾಜ್ಯದಲ್ಲಿ ಕಾಣಿಸಿಕೊಂಡಿವೆ.
ರಾಜ್ಯದಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಎವೈ.4 ಮತ್ತು ಎವೈ.12ನ ರೂಪಾಂತರವು ನಿಧಾನವಾಗಿ ಕಡಿಮೆಯಾಗುತ್ತಿರು ವುದು ಅಧ್ಯಯನದಿಂದ ತಿಳಿದುಬಂದಿದೆ.

ಈ ವೈರಾಣು ತನ್ನ ಸ್ಪೈಕ್‌ ಪ್ರೋಟಿನ್‌ನ ನೆರವಿನಿಂದ ಮನುಷ್ಯನ ಕೋಶಗಳಿಗೆ ಹಾನಿ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ಇವುಗಳ ವರ್ತನೆ ಮೇಲೆ ನಿಗಾ ಇಡುವುದು ತುಂಬಾ ಅವಶ್ಯ ಎಂದು ರಾಜ್ಯ ಕೋವಿಡ್‌–19 ಜಿನೋ ಮಿಕ್‌ ಸರ್ವೇಲೆನ್ಸ್‌ ಸಮಿತಿಯ ಸದಸ್ಯರೂ ಆಗಿರುವ ಎಚ್‌ಸಿಜಿ ಆಸ್ಪತ್ರೆಯ ಡೀನ್‌ ಡಾ.ವಿಶಾಲ್‌ ರಾವ್ ತಿಳಿಸಿದ್ದಾರೆ.

ಎವೈ.4 ಎಂದು ಕರೆಯಲ್ಪಡುವ ಡೆಲ್ಟಾ ರೂಪಾಂತರದ ಉಪ ರೂಪಾಂತರದಲ್ಲಿ ಸ್ಪೈಕ್‌ ಪ್ರೋಟಿನ್‌ ಮ್ಯುಟೇಷನ್‌ (ಜಿ142ಡಿ) ಕರ್ನಾಟಕದ ಮಟ್ಟಿಗೆ ಶೇ 26ರಷ್ಟು ಕಂಡುಬಂದಿದೆ. ಎವೈ.12 ರೂಪಾಂ ತರದಲ್ಲಿ ಇದು ಕೇವಲ ಶೇ 1.3ರಷ್ಟು ಕಂಡುಬಂದಿದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು