ಬೆಂಗಳೂರು ನಗರದಲ್ಲಿನ ಬಿಡಿಎ ಮುಖ್ಯ ಕಚೇರಿಯ ಮೇಲೆ ದಿಢೀರ್ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 13 ವಾಹನಗಳಲ್ಲಿ ಬಂದಿರುವಂತ 60ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ನಾಲ್ಕು ತಂಡಗಳು, ಬಿಡಿಎ ಮುಖ್ಯದ್ವಾರವನ್ನು ಬಂದ್ ಮಾಡಿ, ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಣ ವಸೂಲಿ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಇದೀಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು, ಬಿಡಿಎ ಭೂ ಸ್ವಾಧೀನ ವಿಭಾಗದ ಎಲ್ಲೆಡೆ ಕಡತಗಳನ್ನು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.