News Karnataka Kannada
Monday, May 06 2024
ಬೆಂಗಳೂರು

ಬೆಂಗಳೂರು: ಕಣಗಾಲ್ ಪ್ರಭಾಕರ ಶಾಸ್ತ್ರಿ ಇನ್ನಿಲ್ಲ

Untitled 2
Photo Credit :
ಬೆಂಗಳೂರು: ಸಾಹಿತ್ಯಬ್ರಹ್ಮ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ  ಸುಪುತ್ರರ, ಚಲನಚಿತ್ರ ನಿರ್ದೇಶಕರು, ಚಿತ್ರಸಾಹಿತಿಗಳೂ ಆಗಿದ್ದ ಪುರುಷೋತ್ತಮ್ ಕಣಗಾಲ್ ರವರು  ಅಮೆರಿಕಾದ ಡಲ್ಲಾಸ್ ನಲ್ಲಿ  ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಕೆಲ ತಿಂಗಳ ಹಿಂದೆ ಅಮೆರಿಕಾದಲ್ಲಿರುವ ಮಗಳ ಮನೆಗೆಂದು ದಂಪತಿಗಳಿಬ್ಬರು ತೆರಳಿದ್ದರು,  ಅವರ ಮಗನೂ ಅಲ್ಲೇ ಇರುವುದರಿಂದ ಮಗ ಹಾಗೂ ಮಗಳ ಮನೆಯಲ್ಲಿ ಒಂದಷ್ಟು ದಿವಸ ಇದ್ದು, ಆಗಸ್ಟ್ ನಲ್ಲಿ ವಾಪಾಸ್ ಬರುವುದಾಗಿ ಹೇಳಿದ್ದರು . ಆದರೆ  ಅವರು ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ.
ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು ಹಲವಾರು ಚಲನಚಿತ್ರಗಳಿಗೆ   ಹಾಡುಗಳನ್ನು  ಬರೆದಿದ್ದಲ್ಲದೆ. ಅಪಾರ  ಭಕ್ತಿಗೀತೆಗಳನ್ನು ರಚಿಸಿದ್ದರು. ಇವರ ಸಾಹಿತ್ಯದ ಹಾಡುಗಳನ್ನು ಹಾಡಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂರವರು, ಎಷ್ಟೇ ಆದರು ತಾವು ಸರಸ್ವತಿ ಪುತ್ರನ ಮಗನಲ್ಲವೇ ಹಾಗಾಗಿಯೇ ತಮಗೆ ಅಕ್ಷರ ಮಾತೆ ಒಲಿದಿದ್ದಾಳೆ ಎಂದು ಹೇಳಿ ಅಭಿನಂದಿಸಿದ್ದರು.
ಚಿಕ್ಕಪ್ಪ ಖ್ಯಾತ ಚಲನಚಿತ್ರ ನಿರ್ದೇಶಕ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರೊಂದಿಗೆ ಇದ್ದ  ಅಪಾರ ಒಡನಾಟದಿಂದ ಸಿನಿಮಾ ಜಗತ್ತನ್ನು ಚೆನ್ನಾಗಿ ಬಲ್ಲವರಾಗಿದ್ದರು. ಹಲವಾರು ಧಾರವಾಹಿಗಳನ್ನು, ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. “ಪುಟ್ಟಣ್ಣ ಕಣಗಾಲ್ ಪತ್ರಿಷ್ಠಾನ ಟ್ರಸ್ಟ್ ” ನ ಸದಸ್ಯರೂ ಆಗಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು