ಬೆಂಗಳೂರು: ಬೆಂಗಳೂರಿನ ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ಕಪ್ಪು ಶಿಲೀಂಧ್ರ ಪ್ರಕರಣವೊಂದು ಪತ್ತೆಯಾಗಿದೆ. ಏಪ್ರಿಲ್ 22ರಂದು 64 ವರ್ಷದ ಮಹಿಳೆಯೊಬ್ಬರು ತೀವ್ರ ಉಸಿರಾಟದ ತೊಂದರೆ ಹಾಗೂ ಮುಖ ಊದಿಕೊಂಡಂತ ಸ್ಥಿತಿಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಆ ವೃದ್ಧೆಯನ್ನು ಪರೀಕ್ಷೆಗೆ ಒಳಪಿಡಿಸಂತ ಆಸ್ಪತ್ರೆಯ ಕನ್ಸಲ್ಟಂಟ್ ಫಿಜಿಷಿಯನ್, ಆಕೆಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿರೋದನ್ನು ಪತ್ತೆ ಹಚ್ಚಿದ್ದಾರೆ.
ಅವರ ಆರೋಗ್ಯ ಮಾಹಿತಿ ಕೇಳಿದಾಗ ಅವರೊಬ್ಬರು ಡಯಾಬಿಟಿಸ್ ರೋಗಿಯಾಗಿದ್ದು, ಮೂತ್ರಪಿಂಡ ವೈಫಲ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಇದೀಗ ಆಕೆಗೆ ಆಂಟಿ ಬಯಾಟಿಕ್ ಮತ್ತು ಆಂಟಿ ಫಂಗಲ್ ಗೆ ಚಿಕಿತ್ಸೆಯನ್ನು ವೈದ್ಯರು ನೀಡುತ್ತಿದ್ದಾರೆ. ಚಿಕಿತ್ಸೆಯ ಬಳಿಕ ಅವರ ಆರೋಗ್ಯ ಉತ್ತಮವಾಗಿದೆ ಎಂದು ಡಾ.ಆದರ್ಶ ನಾಯಕ್ ತಿಳಿಸಿದ್ದಾರೆ.