News Karnataka Kannada
Friday, May 10 2024
ಬೆಂಗಳೂರು

ಬಿ ಎಸ್ ಎಫ್ ಕ್ಯಾಂಪ್ ನ 22 ಮಂದಿಗೆ ಕೋವಿಡ್ ಪಾಸಿಟಿವ್

Ita Covid19 Mng 06082021
Photo Credit :
ಬೆಂಗಳೂರು : ಯಲಹಂಕದ ಬಿಎಸ್‌ಎಫ್‌ ಕ್ಯಾಂಪ್‌ಗೆ ತರಬೇತಿಗಾಗಿ ಬಂದಿದ್ದ ಶಿಲ್ಲಾಂಗ್‌ ನ ಯೋಧರ ಪೈಕಿ ಮತ್ತೆ 22 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕೋವಿಡ್‌ ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ.

ಸೋಂಕಿತ ಯೋಧರಲ್ಲಿ 22 ಮಂದಿ ಯಲಹಂಕ ಕೋವಿಡ್‌ ಆರೈಕೆ ಕೇಂದ್ರ, 61 ಯೋಧರ  ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆ ಮತ್ತು 21 ಮಂದಿ ಆಕಾಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 34 ಯೋಧರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದು ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಧನಂಜಯ ತಿಳಿಸಿದ್ದಾರೆ .

ಈ ಯೋಧರ ತಂಡ ಸೆ.15ರಂದು ಯಲಹಂಕದ ಬಿಎಸ್‌ಎಫ್‌ ಕ್ಯಾಂಪ್‌ಗೆ ಬಂದಿತ್ತು. ಮೂರು ದಿನದ ಬಳಿಕ ಕೆಲವರಲ್ಲಿ ಶೀತ, ಕೆಮ್ಮು, ಜ್ವರ ಸೇರಿದಂತೆ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸೆ.19ರಂದು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಚಿಕ್ಕಜಾಲದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕ್ಯಾಂಪ್‌ಗೆ ತೆರಳಿ 150 ಮಂದಿ ಯೋಧರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದು, ಆರಂಭದಲ್ಲಿ 34 ಯೋಧರಲ್ಲಿ ಸೋಂಕು ದೃಢಪಟ್ಟಿತ್ತು.

ನಂತರ ನಡೆದ ಕೋವಿಡ್‌ ಪರೀಕ್ಷೆಯಲ್ಲಿ 50ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಮೂರ್ನಾಲ್ಕು ದಿನಗಳ ಹಿಂದೆ ನಡೆದಿದ್ದ ಪರೀಕ್ಷೆಯಲ್ಲಿ ಮತ್ತೆ 22 ಯೋಧರಲ್ಲಿ ಸೋಂಕು ದೃಢಪಟ್ಟಿತ್ತು. ಬುಧವಾರವೂ ಕೋವಿಡ್‌ ಪರೀಕ್ಷೆ ನಡೆದಿದ್ದು ವರದಿ ಇಂದು ಬರಲಿದೆ. ಸೋಂಕಿತ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಹಾಗಾಗಿ ತರಬೇತಿಗೆಂದು ಬಂದಿರುವ ಎಲ್ಲ ಯೋಧರಿಗೆ ಮತ್ತೊಮ್ಮೆ ಎರಡನೇ ಸುತ್ತಿನ ಕೋವಿಡ್‌ ಪರೀಕ್ಷೆ ಮಾಡಲು ಸೇನೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸೋಂಕಿತರು ವಾಸವಿದ್ದ ಕೊಠಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶವನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಲಾಗಿದೆ ಎಂದು ಬಿಎಸ್‌ಎಫ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ಡಾ.ಧನಂಜಯ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು