ಬೆಂಗಳೂರು : ,ಬೆಂಗಳೂರಿನಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಲು ಬಿಬಿಎಂಪಿ ಕೇರ್ ಇಂಡಿಯಾ ಸಹಯೋಗದಲ್ಲಿ 80 ಲಸಿಕಾ ವಾಹನಗಳಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಚಾಲನೆ ನೀಡಿದ್ದಾರೆ.ಬಿಬಿಎಂಪಿಯು ಕೇರ್ ಇಂಡಿಯಾ ಸಹಯೋಗದಲ್ಲಿ 80 ದ್ವಿಚಕ್ರ ವಾಹನ ಹಾಗೂ 16 ಕಾರು ಲಸಿಕೆ ವಾಹನಗಳಿಗೆ ಇಂದು ಚಾಲನೆ ನೀಡಲಾಯಿತು.
ನಗರದಲ್ಲಿ ಕಡಿಮೆ ಲಸಿಕೆಯಾಗಿರುವ ಪ್ರದೇಶಕ್ಕೆ ತೆರಳಿ ಲಸಿಕೆ ನೀಡುವುದು ಇದರ ಉದ್ದೇಶವಾಗಿದೆ. ವಿಶೇಷ ಆಯುಕ್ತರು ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.