News Karnataka Kannada
Monday, April 29 2024
ಬೆಂಗಳೂರು

ಬಿಜೆಪಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಭದ್ರಗೊಳಿಸಿದೆ: ಕುಮಾರಸ್ವಾಮಿ

Untitled 1
Photo Credit :

ಬೆಂಗಳೂರು: ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವುದು ಚಾಳಿಯಾಗಿದೆ ಎಂದು ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, 2006ರಲ್ಲಿ ಜೆಡಿಎಸ್ ದೆಸೆಯಿಂದ ಅಧಿಕಾರದ ರುಚಿ ಕಂಡ ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವುದು ಚಾಳಿ ಆಗಿಬಿಟ್ಟಿದೆ.

ಆಪರೇಷನ್ ಕಮಲʼ ಎಂಬ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಬಿಜೆಪಿ ಅಭದ್ರಗೊಳಿಸಿದೆ’ ಎಂದು ಟೀಕಿಸಿದ್ದಾರೆ.

ಬಿಜೆಪಿಯ ನಯವಂಚಕ & ಅನೈತಿಕ ರಾಜಕಾರಣದ ಮುಖವನ್ನು ಬೆಂಗಳೂರು ನಗರದ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಮುನಿರಾಜು ಎಂಬ ಮಹಾಶಯರೇ ಬಹಿರಂಗಪಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದು ಅಡ್ಡದಾರಿಯಲ್ಲೇ ಎನ್ನುವುದು ಈಗ ರುಜುವಾತಾಗಿದೆ. 1998ರ ವಿಧಾನಸಭೆ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಹಾಲಿ ಕಂದಾಯ ಸಚಿವ ಆರ್.ಅಶೋಕ್ ಸ್ಪರ್ಧಿಸಿದಾಗ ಯಲಹಂಕದಿಂದ ಬಂದಿದ್ದ 1,000 ಕಾರ್ಯಕರ್ತರು ತಲಾ 5ರಿಂದ 10 ಕಳ್ಳವೋಟು ಹಾಕಿ ಅವರನ್ನು ಗೆಲ್ಲಿಸಿದ್ದರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು