ಬೆಂಗಳೂರು: ನಕಲಿ ಸಿಮ್ ಕಾರ್ಡ್, ಬ್ಯಾಂಕ್ ಖಾತೆ ಬಳಸಿ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಸ್ಯಾಮುಯಲ್ ಒಕೇನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಪೊಲೀಸರು 5 ಸಿಮ್ ಕಾರ್ಡ್, 6 ವಿವಿಧ ಬ್ಯಾಂಕ್ಗಳ ಡೆಬಿಟ್ ಕಾರ್ಡ್ ಜಪ್ತಿ ಮಾಡಿದ್ದಾರೆ.
ಈತ ಈಶಾನ್ಯ ರಾಜ್ಯಗಳ ಜನರಿಗೆ ಹಣ ನೀಡಿ ಬ್ಯಾಂಕ್ ಖಾತೆ ತೆರೆಯುತ್ತಿದ್ದ. ಅವರದ್ದೇ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಕೂಡ ಖರೀದಿಸುತ್ತಿದ್ದ. ಕೊರಿಯರ್ ಮೂಲಕ ಸಿಮ್ ಕಾರ್ಡ್ ಬೆಂಗಳೂರಿಗೆ ತರಿಸಿಕೊಳ್ತಿದ್ದ. ಬಳಿಕ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ಜನರಿಗೆ ಕರೆ ಮಾಡುತ್ತಿದ್ದ.
ಕೆಲಸ, ಲೋನ್ ಕೊಡಿಸುವುದಾಗಿ ಕರೆಮಾಡಿ ಹಣ ಹಾಕಿಸಿಕೊಳುತ್ತಿದ್ದ. ಲಾಟರಿ ಹಾಗೂ ಗಿಫ್ಟ್ ಬಂದಿದೆ ಎಂತಲೂ ಹಣ ಹಾಕಿಸಿಕೊಳ್ಳುತ್ತಿದ್ದ. ಈ ಸಂಬಂಧ ಗುಪ್ತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.