ಬೆಂಗಳೂರು : ಬೆಂಗಳೂರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇಂದಿನಿಂದ ಕೆಂಗೇರಿ ಮತ್ತು ನಾಯಾಂಡಳ್ಳಿ ಮಾರ್ಗಕ್ಕೆ ಮೆಟ್ರೋ ಮಾರ್ಗ ಸಂಚರಿಸಲಿದೆ.
ನೇರಳೆ ಮಾರ್ಗವಾಗಿ ನಾಯಂಡಳ್ಳಿ- ಕೆಂಗೇರಿಗೆ ಮೆಟ್ರೋ ರೈಲು ಸಂಚಾರ ಆರಂಭವಾಗಿದ್ದು, ಇಂದು ಬೆಳಗ್ಗೆ 10:30ರ ವೇಳೆಗೆ ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ.
ಸೋಮವಾರ ಬೆಳಗ್ಗೆ 7 ಗಂಟೆಯಿಂದ ಜನರೊಂದಿಗೆ ಮೆಟ್ರೋ ಸಂಚರಿಸಲಿದ್ದು, 10 ನಿಮಿಷಕ್ಕೆ ಒಮ್ಮೆ ರೈಲು ಸಂಚರಿಸಲಿದೆ. ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿಯವರಿಗೆ ಸಂಚರಿಸಲಿರುವ ಮೆಟ್ರೋ ಮಾರ್ಗಕ್ಕೆ 56 ರೂ. ಮೊತ್ತದ ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.