ಬೆಂಗಳೂರು : ಆಸ್ತಿ ತೆರಿಗೆದಾರರಿಗೆ ಬಿಬಿಎಂಪಿ ಸಿಹಿಸುದ್ದಿ ನೀಡಿದ್ದು, ಬಿಬಿಎಂಪಿಯ ಆಸ್ತಿ ತೆರಿಗೆ ಪಾವತಿಗೆ ನೀಡುತ್ತಿದ್ದ ಶೇ. 5 ರಷ್ಟು ರಿಯಾಯಿತಿಯನ್ನು ಮೇ ಅಂತ್ಯದವರಿಗೆ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ವಾಣಿಜ್ಯ ಉದ್ಯಮಿಗಳು, ನಾಗರಿಕರು ಆಸ್ತಿ ತೆರಿಗೆ ರಿಯಾಯಿತಿ ಮೇ 31 ರವರೆಗೆ ವಿಸ್ತರಣೆ ಮಾಡಬೇಕು ಎಂದು ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ರಿಯಾಯಿತಿ ಅವಧಿ ವಿಸ್ತರಣೆಗೆ ಬಿಬಿಎಂಪಿಗೆ ಸೂಚಿಸಿದೆ.
ಇನ್ನು ಆರ್ಥಿಕ ವರ್ಷದ ಮೊದಲ ತಿಂಗಳ ಅಂತ್ಯಕ್ಕೆ ಬಿಬಿಎಂಪಿ 1,455 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದೆ. ಇದೀಗ ಶೇ. 5 ರಷ್ಟು ರಿಯಾಯಿತಿ ವಿಸ್ತರಣೆ ಮಾಡಿರುವುದರಿಂದ ಮೇ ತಿಂಗಳ ಅಂತ್ಯಕ್ಕೆ ಬಿಬಿಎಂಪಿಯ ಒಟ್ಟು ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ 2 ಸಾವಿರ ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ.