ಬೆಂಗಳೂರು : ನಗರದಲ್ಲಿ ಈಗಾಗಲೇ ಅನೇಕರು ನಾಯಿಗಳನ್ನು ಸಾಕುತ್ತಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಾಯಿಗಳನ್ನು ಸಾಕಿ, ವಾಕಿಂಗ್, ಸುತ್ತಾಟ ಕೂಡ ನಡೆಸ್ತಾ ಇದ್ದಾರೆ. ನಾಯಿ ಸಾಕೋರ ಸಂಖ್ಯೆ ಕೂಡ ನಗರದಲ್ಲಿ ಹೆಚ್ಚಾಗಿದ್ದು, ಈ ಸಂದರ್ಭದಲ್ಲೇ ನಾಯಿಗಳನ್ನು ಸಾಕೋರಿಗೆ ಬಿಬಿಎಂಪಿ ಬಿಗ್ ಶಾಕ್ ಕೊಡೋದಕ್ಕೆ ಮುಂದಾಗಿದೆ. ಅದೇ ನಾಯಿಗಳನ್ನು ಸಾಕೋದಕ್ಕೆ ಲೈಸೆನ್ಸ್ ಪಡೆಯೋದನ್ನು ಕಡ್ಡಾಯಗೊಳಿಸಲು ಸಿದ್ದತೆ ನಡೆಸಿದೆ.
ಈ ಕುರಿತಂತೆ ಬಿಬಿಎಂಪಿಯ ಉನ್ನತ ಮೂಲಕಗಳಿಂದ ಮಾಹಿತಿ ದೊರೆತಿದ್ದು, ಬೆಂಗಳೂರಿನಲ್ಲಿ ನಾಯಿ ಸಾಕೋದಕ್ಕೆ ನೋಂದಣಿ ಸೇರಿದಂತೆ ಲೈಸೆನ್ಸ್ ಪಡೆಯಲು ಬೇಕಾದಂತ ಮಾನದಂಡಗಳ ಕರಡನ್ನು ಬಿಬಿಎಂಪಿ ಸಿದ್ಧಪಡಿಸಿದೆ ಎನ್ನಲಾಗಿದೆ.
ಇನ್ನೂ ಈ ಕರಡಿನಲ್ಲಿನ ಮಾಹಿತಿಯಂತೆ ನಾಯಿ ಸಾಕೋದಕ್ಕೆ ಮಾಲೀಕರು ಸಹ ನೋಂದಣಿ ಮಾಡಿಸಿಕೊಳ್ಳಬೇಕಾಗಿದ್ದು, ನಾಯಿ ಸಾಕೋದಕ್ಕೆ ಲೈಸೆನ್ಸ್ ಪಡೆಯೋದು ಕಡ್ಡಾಯವಾಗಿದೆ. ಹೀಗೆ ಲೈಸೆನ್ಸ್ ಪಡೆದಂತ ನಾಯಿಗಳಿಗೆ ಮೈಕ್ರೋ ಚಿಪ್ ಕೂಡ ಅಳವಡಿಸಲಾಗುತ್ತದಿ ಎನ್ನಲಾಗಿದೆ.
ಬಿಬಿಎಂಪಿ ನಾಯಿ ಸಾಕೋದಕ್ಕೂ ಲೈಸೆನ್ಸ್, ಮಾಲೀಕರ ನೋಂದಣಿ ಕಡ್ಡಾಯಗೊಳಿಸುವಂತ ಕರಡನ್ನು ಕೆಲವೇ ದಿನಗಳಲ್ಲಿ ಆಕ್ಷೇಪಣೆಗಾಗಿ ಪ್ರಕಟಿಸಲಿದ್ದು, ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಿದೆ ಎನ್ನಲಾಗಿದೆ. ಈ ನಿಯಮ ಜಾರಿಗೊಂಡ್ರೇ, ಇನ್ಮುಂದೆ ಬೆಂಗಳೂರಿನಲ್ಲಿ ನಾಯಿ ಸಾಕೋದಕ್ಕೆ ಮಾಲೀಕರು ನೋಂದಣಿ, ಲೈಸೆನ್ಸ್ ಪಡೆಯಬೇಕಿದೆ.