ವಿಜಯಪುರ: ಗೂಡ್ಸ್ ರೈಲಿನ ಆರು ಬೋಗಿಗಳು ಹಳಿ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ಮುಳವಾಡ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ವಿಜಯಪುರ ಮಾರ್ಗವಾಗಿ ಸೊಲ್ಲಾಪುರ-ಹುಬ್ಬಳ್ಳಿ ನಡುವೆ ಹಾಕಲಾಗಿದ್ದ ರೈಲು ಹಳಿಗೆ ಹಾನಿಯಾಗಿದೆ. ಸರಕುಗಳನ್ನು ರೈಲ್ವೆ ಮೂಲಕ ಸಾಗಿಸಲಾಗುತ್ತಿತ್ತು ಮತ್ತು ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ.
ಈ ಘಟನೆಯಿಂದಾಗಿ ವಿಜಯಪುರ ಮಾರ್ಗದ ಮೂಲಕ ಸೊಲ್ಲಾಪುರ, ಹುಬ್ಬಳ್ಳಿ, ಬಾಗಲಕೋಟೆ ಮತ್ತು ಗದಗಕ್ಕೆ ಹೋಗಬೇಕಿದ್ದ ಆರು ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿದ ವಿಜಯಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.