News Karnataka Kannada
Wednesday, May 01 2024
ವಿಜಯಪುರ

ವಿಜಯಪುರ: ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ, ಸಕಲ ಸರ್ಕಾರಿ ಗೌರವಗಳೊಂದಿಗೆ ಜ.3ರಂದು ಅಂತಿಮ ಕ್ರಿಯೆ

Vijayapura: Siddeshwara Swamiji's last rites to be performed on Jan. 3 with full state honours
Photo Credit : News Kannada

ವಿಜಯಪುರ: ನಡೆದಾಡುವ ದೇವರೆಂದೆ ಖ್ಯಾತರಾದ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮಿಜೀಗಳು, ಜ್ಞಾನಯೋಗಾಶ್ರಮ ವಿಜಯಪುರ ಇವರು ದಿನಾಂಕ: 02-01-2023 ರಂದು ಲಿಂಗೈಕ್ಯರಾದರೆಂದು ತಿಳಿಸಲು ತೀವ್ರ ವಿಷಾಧಿಸುತ್ತೇವೆ. ಈ ಪ್ರಯುಕ್ತ ರಾಜ್ಯ ಸರ್ಕಾರವು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಪೂಜ್ಯರ ಅಂತಿಮ ಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ನಿರ್ದೇಶಿರುತ್ತದೆ ಮತ್ತು ಪೂಜ್ಯರ ಅಂತಿಮ ದರ್ಶನಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗೆ ಸರ್ಕಾರ ರಜೆ ಘೋಷಿಸಿದೆ ಎಂದು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಜಿಲ್ಲಾಡಳಿತವು ಪೂಜ್ಯರ ಪಾರ್ಥಿವ ಶರೀರವನ್ನು ಶ್ರೀ ಜ್ಞಾನಯೋಗಾಶ್ರಮದಲ್ಲಿ ಈ ರಾತ್ರಿಯಿಂದ ನಾಳೆ ಬೆಳಗ್ಗೆ 4.30ರವರೆಗೆ ಭಕ್ತಾದಿಗಳ ದರ್ಶನಕ್ಕಾಗಿ ಇಡಲಾಗುವುದು. ನಂತರ ಪೂಜ್ಯರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಶ್ರೀ ಜ್ಞಾನಯೋಗಾಶ್ರಮದಿಂದ ಸೈನಿಕ ಶಾಲೆಯವರೆಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಭಕ್ತಾದಿಗಳಿಗೆ ಪೂಜ್ಯರ ಅಂತಿಮ ದರ್ಶನವನ್ನು ದಿನಾಂಕ: 03-01-2023 ರ ಬೆಳಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ. ಪೂಜ್ಯರ ಅಂತಿಮ ದರ್ಶನಕ್ಕಾಗಿ ಸೋಲಾಪುರ, ಕಲಬುರಗಿ, ಸಿಂದಗಿ, ಬಾಗಲಕೋಟೆ, ಜಮಖಂಡಿ, ಅಥಣಿಯಿಂದ ಆಗಮಿಸುವ ಭಕ್ತಾದಿಗಳು ನೇರವಾಗಿ ವಿಜಯಪುರ ನಗರದ ರಿಂಗ್ ರೋಡ್ ಮೂಲಕ (ಇಟಗಿ ಪೆಟ್ರೋಲ್ ಪಂಪ್) ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸ್ಥಳದಲ್ಲಿಯೇ ಭಕ್ತಾದಿಗಳಿಗೆ ಪ್ರಸಾದ, ನೀರು, ಇನ್ನಿತರೆ ವ್ಯವಸ್ಥೆ ಮಾಡಲಾಗಿದೆ.

ಭಕ್ತಾದಿಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸೈನಿಕ ಶಾಲೆಯ ಎದುರುಗಡೆ ಇರುವ ನೇತಾಜಿ ಸುಭಾಷ ಚಂದ್ರ ಬೋಸ್, ರಸ್ತೆಯ ಮೂಲಕ ನಡೆದುಕೊಂಡು ಸೈನಿಕ ಶಾಲೆಯ ಮುಖ್ಯ ದ್ವಾರದ ಮೂಲಕ ಪ್ರವೇಶಿಸಬೇಕು. ದರ್ಶನದ ನಂತರ ಸೈನಿಕ ಶಾಲೆಯ 2ನೇ ಗೇಟ್ ಮೂಲಕ (ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರಕರ ದ್ವಾರ) ಹೊರಗಡೆ ಬಂದು ತಮ್ಮ ವಾಹನ ಮೂಲಕ ವಾಪಸ ತೆರಳಬೇಕು. ಸೈನಿಕ ಶಾಲೆಯಲ್ಲಿ ಮಧ್ಯಾಹ್ನ 3.00 ಗಂಟೆಯಿಂದ ಸಾಯಂಕಾಲ 4.00 ಗಂಟೆಯ ಅವಧಿಯಲ್ಲಿ ಸರ್ಕಾರದ ವತಿಯಿಂದ ಸಕಲ ಗೌರವಗಳೊಂದಿಗೆ ಪೂಜ್ಯರಿಗೆ ಅಂತಿಮ ನಮನ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಂಜೆ 4.00 ಗಂಟೆಯಿಂದ ಪುನಃ ತೆರೆದ ವಾಹನದಲ್ಲಿ ಪೂಜ್ಯರ ಪಾರ್ಥೀವ ಶರೀರವನ್ನು ಸೈನಿಕ ಶಾಲೆಯಿಂದ ಶ್ರೀ ಜ್ಞಾನಯೋಗಾಶ್ರಮಕ್ಕೆ ತರಲಾಗುವುದು. (ಮಾರ್ಗ: ಗೋದಾವರಿ-ಶ್ರೀ ಶಂಕರಲಿಂಗ ದೇವಸ್ಥಾನ-ಶಿವಾಜಿವೃತ್ತ – ಗಾಂಧಿವೃತ್ತ- ಶ್ರೀ ಸಿದ್ದೇಶ್ವರ ದೇವಸ್ಥಾನ-ಬಿ.ಎಲ್.ಡಿ.ಇ. ಆಸ್ಪತ್ರೆ-ಶ್ರೀ ಜ್ಞಾನಯೋಗಾಶ್ರಮ), ಭಕ್ತಾದಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತುಕೊಂಡು ಪೂಜ್ಯರ ಪಾರ್ಥೀವ ಶರೀರಕ್ಕೆ ಅಂತಿಮ ನಮನವನ್ನು ಸಲ್ಲಿಸಬಹುದಾಗಿದೆ. ಪೂಜ್ಯರ ಅಂತಿಮ ಕ್ರಿಯೆಯನ್ನು ಸಂಜೆ 5.00 ಗಂಟೆಗೆ ಶ್ರೀ ಜ್ಞಾನಯೋಗಾಶ್ರಮದ ಆವರಣದಲ್ಲಿ ವಿಧಿವಿಧಾನಗಳಂತೆ ನೇರವೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಶ್ರೀ ಜ್ಞಾನಯೋಗಾಶ್ರಮದ ಆವರಣದಲ್ಲಿ ಸ್ಥಳಾವಕಾಶದ ಅಭಾವವಿರುವುದರಿಂದ ಭಕ್ತಾದಿಗಳು ಸೈನಿಕ ಶಾಲೆಯಲ್ಲಿಯೇ ಅಂತಿಮ ದರ್ಶನ ಪಡೆಯಲು ಮನವಿ ಮಾಡಿಕೊಂಡ ಜಿಲ್ಲಾಧಿಕಾರಿಗಳು, ಭಕ್ತಾದಿಗಳು ಯಾವುದೇ ಆತಂತಕ್ಕೆ ಒಳಗಾಗದೇ ಶಾಂತ ರೀತಿಯಿಂದ ವರ್ತಿಸಿ, ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಕೋರಿದ್ದಾರೆ.

ಜಿಲ್ಲೆಯ ಶಾಲಾ-ಕಾಲೇಜು-ಸರ್ಕಾರಿ ಕಚೇರಿಗೆ ರಜೆ ಘೋಷಿಸಿ ಅಧಿಸೂಚನೆ

ಪೂಜ್ಯರ ನಿಧನಕ್ಕೆ ಸರ್ಕಾರವು ತೀವ್ರ ಸಂತಾಪವನ್ನು ವ್ಯಕ್ತಪಡಿಸಿ, ಪೂಜ್ಯರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೋವಿಡ್-19ರ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸಿ, ನೆರವೇರಿಸಲು ಆದೇಶಿಸಿ, ವಿಜಯಪುರ ಜಿಲ್ಲೆಯಲ್ಲಿನ ಎಲ್ಲಾ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಛೇರಿಗಳಿಗೆ ದಿನಾಂಕ:03.01.2023 ರಂದು ರಜೆಯನ್ನು ಘೋಷಿಸಿ, ಸರ್ಕಾರ ಆದೇಶಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು