News Karnataka Kannada
Tuesday, April 30 2024
ವಿಜಯಪುರ

ಬಸವನಬಾಗೇವಾಡಿಯಲ್ಲಿ ಲಘು ಭೂಕಂಪನ, ಭಯಭೀತರಾದ ಸಾರ್ವಜನಿಕರು!

Mild earthquake hits Himachal Pradesh's Chamba
Photo Credit : Pixabay

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಮಂದಿಗೆ ಭಾನುವಾರ ತಡರಾತ್ರಿ 1.53ಕ್ಕೆ ಲಘು ಭೂಕಂಪನದ ಅನುಭವವಾಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಡಾವಣೆಯಲ್ಲಿ, ರಾತ್ರಿ ಏಕಾಏಕಿ ಜೋರಾದ ಸದ್ದಿನೊಂದಿಗೆ ಒಂದು ಸೆಕೆಂಡಿನಷ್ಟು ಭೂಮಿ ಕಂಪಿಸುತ್ತಿದ್ದಂತೆ, ಮನೆಯ ಹೊರಗಡೆ ಮಲಗಿದ್ದ ಜನರು, ಏಕಾಏಕಿ ಎದ್ದು ಗಾಬರಿಗೊಂಡು ಓಡುವಂತಾಗಿದೆ.

ಅಲ್ಲದೆ ಈ ಭೂಮಿ ಕಂಪನದ ಸದ್ದಿಗೆ ಆಕಳು, ಕರು, ಶ್ವಾನಗಳು ಕೂಡ ಭೀತಿಗೊಂಡು ಕೆಲ ಹೊತ್ತು ಜೋರಾಗಿ ಚೀರಾಡಿದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು