ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದ ನಿವಾಸಿಗಳಿಗೆ ಶುಕ್ರವಾರ ಬೆಳಗಿನ ಜಾವ ಏಳು ಬಾರಿ ಭೂಮಿಕಂಪನದ ಅನುಭವವಾಗಿದ್ದು, ಆತಂಕಗೊಳ್ಳುವಂತಾಗಿದೆ.
ಬೆಳಗಿನ ಜಾವ 4.30 ರಿಂದ 5.20 ರ ವೇಳೆ ಏಳು ಬಾರಿ ಭೂಮಿ ಕಂಪಿಸಿದಕ್ಕೆ ಬೆಚ್ಚಿಬಿದ್ದ ಮಂದಿ, ಮನೆಯಿಂದ ಹೊರ ಓಡಿಬಂದಿದ್ದಾರೆ. ಈ ಭೂಕಂಪನದ ಅನುಭವದಿಂದ ಸಾರ್ವಜನಿಕರು ಭೀತಿಗೊಳ್ಳುವಂತಾಗಿದೆ.