Bengaluru 27°C
Ad

ಚಾಕೊಲೇಟ್ ಗ್ಯಾಂಗ್ ನಂತೆ ಈಗ ಆಕ್ಟಿವ್ ಆಗಿದೆ ಜ್ಯೂಸ್ ಗ್ಯಾಂಗ್

ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ  ಬಸ್​​ನಲ್ಲಿಯೇ ಜ್ಯೂಸ್ ಹಾಗೂ ಬಾಳೆ ಹಣ್ಣು ಕೊಟ್ಟು ನಗನಾಣ್ಯ ದೋಚಿ ಪರಾರಿಯಾಗಿರುವಂತಹ ಘಟನೆ ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿದ್ದ ಬಸ್ ನಲ್ಲಿ ನಡೆದಿದೆ.

ಬೆಳಗಾವಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ  ಬಸ್​​ನಲ್ಲಿಯೇ ಜ್ಯೂಸ್ ಹಾಗೂ ಬಾಳೆ ಹಣ್ಣು ಕೊಟ್ಟು ನಗನಾಣ್ಯ ದೋಚಿ ಪರಾರಿಯಾಗಿರುವಂತಹ ಘಟನೆ ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿದ್ದ ಬಸ್ ನಲ್ಲಿ ನಡೆದಿದೆ.

ಸಂಜೀವ್ ಖೋತ (40) ಹಾಗೂ ಮತ್ತೋರ್ವ ಪ್ರಯಾಣಿಕರಿಂದ ಗ್ಯಾಂಗ್ ಸುಲಿಗೆ ಮಾಡಿದೆ.

ಜ್ಯೂಸ್​​ನಲ್ಲಿ ಮೂರ್ಛೆ ಬರುವ ಪದಾರ್ಥ ಮಿಶ್ರಣ ಮಾಡಿ ಪ್ರಜ್ಞೆ ತಪ್ಪಿಸಿದ್ದು, ಬಂಗಾರದ ಚೈನ್, ಬ್ಯಾಗ್, ಪರ್ಸ್ ಕದ್ದು ಪರಾರಿ ಆಗಿದ್ದಾರೆ.

ಸದ್ಯ ಹದಿನಾಲ್ಕು ಗಂಟೆಯಿಂದ ಸಂಪೂರ್ಣ ಪ್ರಜ್ಞಾಹೀನ‌ ಸ್ಥಿತಿಯಲ್ಲಿರುವ ಸಂಜೀವ್ ಖೋತಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮತ್ತೋರ್ವನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ರಾಜ್ಯದಲ್ಲಿ ಇತ್ತೀಚೆಗೆ ರೈಲಿನಲ್ಲಿ ಚಾಕೊಲೇಟ್ ಗ್ಯಾಂಗ್ ​​ಭಾರಿ ಸದ್ದು ಮಾಡಿತ್ತು. ರೈಲಿನಲ್ಲಿ ಮತ್ತು ಬರುವ ಚಾಕಲೇಟ್​​ ನೀಡಿ ನಗನಾಣ್ಯವನ್ನು ಗ್ಯಾಂಗ್ ದೋಚುತಿತ್ತು. ಇದೀಗ ಆ ಗ್ಯಾಂಗ್ ಬಳಿಕ ಬಸ್​ನಲ್ಲಿ ಜ್ಯೂಸ್ ಗ್ಯಾಂಗ್  ಕಾಟ ಶುರುವಾಗಿದೆ.

Ad
Ad
Nk Channel Final 21 09 2023
Ad