ಹಾವೇರಿ: ಅನ್ಯಕೋಮಿನ ವಿವಾಹಿತ ಮಹಿಳೆಯೊಂದಿಗೆ ಪುರುಷ ಸಿಕ್ಕಿಬಿದಿದ್ದು, ಇದರಿಂದ ರೊಚ್ಚಿಗೆದ್ದ ಯುವತಿ ಪತಿಚಯಸ್ಥ ಯುವಕರ ಗುಂಪು ಪುರುಷನ ಮೇಲೆ ಹಲ್ಲೆ ಮಾಡಿದ ಘಟನೆ, ಹಾನಗಲ್ ಪಟ್ಟಣದ ನಾಲ್ಕರ ಕ್ರಾಸ್ ಬಳಿ ಇರುವ ಖಾಸಗಿ ಹೊಟೇಲ್ನಲ್ಲಿ ಘಟನೆ ನಡೆದಿದೆ.
ಆ ಮೂಲಕ ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ಕೇಸ್ ತಡವಾಗಿ ಬೆಳಕಿಗೆ ಬಂದಿದೆ.
ರೂಂನಲ್ಲಿ ನೀರು ಬರುತ್ತಿದೆಯಾ ಎಂದು ಬಾಗಿಲು ತೆರೆಸಿದ್ದಾರೆ. ಬಾಗಿಲು ಓಪನ್ ಮಾಡುತ್ತಿದ್ದಂತೆ ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಹುಡುಗಿನೇ ಬೇಕಿತ್ತಾ ನಿಂಗೆ ಅಂತ ವ್ಯಕ್ತಿ ಮೇಲೂ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಸದ್ಯ ಮಹಿಳೆ ಮೇಲೆ ಬೇರೆ ದೌರ್ಜನ್ಯ ನಡೆದಿದೆಯಾ ಎಂಬ ಬಗ್ಗೆ ತನಿಖೆ ಪೊಲೀಸರು ನಡೆಸುತ್ತಿದ್ದಾರೆ. ಮಹಿಳೆ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಮಹಿಳೆಗೆ ಹಾನಗಲ್ ತಾಲೂಕ ಆಸ್ಪತ್ರೆಯಲ್ಲಿ ಪೊಲೀಸರು ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ.