News Karnataka Kannada
Sunday, April 28 2024
ಗದಗ

ಡಿಸಿಎಂ ಶಿವಕುಮಾರ್‌ ಕುರಿತು ಸ್ಫೋಟಕ ಹೇಳಿಕೆ ನೀಡಿದ ಈಶ್ವರಪ್ಪ

ಪುತ್ರನಿಗೆ ಬಿಜೆಪಿ ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಕೆಎಸ್ ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.
Photo Credit : News Kannada

ಗದಗ: ಲೋಕಸಭೆ ಚುನಾವಣೆ ಬಳಿಕ ಮತ್ತೆ ಡಿಸಿಎಂ ಡಿಕೆ ಶಿವಕುಮಾರ್​​ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಬಾಂಬ್​ ಸಿಡಿಸಿದ್ದಾರೆ.

ಗದಗದಲ್ಲಿ ಮಾತನಾಡಿದ ಅವರು ಡಿಕೆ ಶಿವಕುಮಾರ್ ಮನೆಯಲ್ಲಿ ಸಿಬಿಐ ರೇಡ್ ಆದಾಗ ನೂರಾರು ಕೋಟಿ ರೂ. ಅಕ್ರಮ‌ ದಾಖಲೆಗಳು ಸಿಕ್ಕಿದೆ. ವಿಚಾರಣೆ ಮುಗಿದು ಚಾರ್ಜಶಿಟ್ ಹಾಕುವಂಥ ಸಂದರ್ಭ ಇತ್ತು. ತಮ್ಮ ಕೈಯಲ್ಲಿ ಸರ್ಕಾರ ಇದೆ ಅಂತಾ ಹೈಕಮಾಂಡ್ ಒತ್ತಡಕ್ಕೆ ಒಳಗಾಗಿದ್ದರು ಎಂದಿದ್ದಾರೆ.

ಹೈಕಮಾಂಡ್ ಕೈಗೊಂಬೆಯಾಗಿ ಡಿಕೆ ಶಿವಕುಮಾರ್​ ಮೇಲಿನ ಕೇಸನ್ನು ವಿತ್ ಡ್ರಾ ಮಾಡಿದರು. ತಾತ್ಕಾಲಿಕ ರಿಲೀಫ್ ಅಷ್ಟೇ ಸಿಕ್ಕಿದೆ. ಆದರೆ ಎಫ್​ಐಆರ್​ ವಿತ್ ಡ್ರಾ ಮಾಡಿಲ್ಲ. ಲೋಕಸಭೆ ಚುನಾವಣೆ ಬಳಿಕ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು