News Karnataka Kannada
Friday, May 03 2024
ಬೆಳಗಾವಿ

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಇಸ್ಲಾಂ ಮತಾಂತರಕ್ಕೆ ಒತ್ತಾಯ

ಇದೀಗ ರಾಜ್ಯದಲ್ಲಿ ಮತ್ತೋರ್ವ ಅನ್ಯಕೋಮಿನ ವ್ಯಕ್ತಿಯಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು ಇಸ್ಲಾಂ ಧರ್ಮಕ್ಕೆ ಸೇರುವಂತೆ ಒತ್ತಾಯಿಸಿದ್ದಾರೆ. ಅವರ ಧರ್ಮಕ್ಕೆ ಸೇರದಿದ್ದರೆ ಸಂತ್ರಸ್ಥ ಮಹಿಳೆಯ ಖಾಸಗಿ ಫೋಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ
Photo Credit : NewsKarnataka

ಬೆಳಗಾವಿ : ಇದೀಗ ರಾಜ್ಯದಲ್ಲಿ ಮತ್ತೋರ್ವ ಅನ್ಯಕೋಮಿನ ವ್ಯಕ್ತಿಯಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು ಇಸ್ಲಾಂ ಧರ್ಮಕ್ಕೆ ಸೇರುವಂತೆ ಒತ್ತಾಯಿಸಿದ್ದಾರೆ. ಅವರ ಧರ್ಮಕ್ಕೆ ಸೇರದಿದ್ದರೆ ಸಂತ್ರಸ್ಥ ಮಹಿಳೆಯ ಖಾಸಗಿ ಫೋಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದೀಗ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಆರೀಫ್ ಮತ್ತು ಆತನ ಪತ್ನಿ ಬಂಧಿತ ಆರೋಪಿಗಳು.

ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ನಿವಾಸಿ ಸಂತ್ರಸ್ತ ಮಹಿಳೆಯ ಮತ್ತು ಪತಿ ಕಿರಾಣಿ ಅಂಗಡಿ ಹೊಂದಿದ್ದಾರೆ. ಈ ವಿಚಾರ ತಿಳಿದ ಆರೋಪಿ ಆರೀಫ್ ಬೇಪಾರಿ ಅವರನ್ನು ಪರಿಚಯ ಮಾಡಿಕೊಂಡು ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯನ್ನು ಬೆಳಗಾವಿಗೆ ಕರೆತಂದು ನಿರಂತರ ‌ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಬೆಳಗಾವಿ ಬಂದ ಬಳಿಕ ಆರೀಫ್‌ಗೆ ಮತ್ತೆ ಐವರು ದುಷ್ಕರ್ಮಿಗಳು ಸಾಥ್ ನೀಡಿದ್ದಾರೆ. ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯದ ಮತ್ತು ಮಹಿಳೆಯ ಖಾಸಗಿ ಫೋಟೋಗಳನ್ನು ಸೆರೆಹಿಡಿದು, ಮತಾಂತರಗೊಳ್ಳುವಂತೆ ಬ್ಯ್ಲಾಕ್​ ಮೇಲ್​ ಪೀಡಿಸಲು ಆರಂಭಿಸಿದ್ದಾರೆ.

“ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳ್ಳು” ಇಲ್ಲದಿದ್ದರೆ ಫೋಟೋ ವೈರಲ್ ಮಾಡುತ್ತೇವೆ ಅಂತ ಬ್ಯ್ಲಾಕ್​ ಮೇಲೆ ಮಾಡಿದ್ದಾರೆ. ಹಣೆಗೆ ಕುಂಕುಮ ಹಚ್ಚುವುದನ್ನು ನಿಲ್ಲಿಸಬೇಕು, ಹಿಂದೂ ಸಂಪ್ರದಾಯ ಬಿಡಬೇಕು. ನಿತ್ಯ ಬುರ್ಖಾ ಧರಿಸುವ ಜೊತೆಗೆ ಐದು ಸಲ ನಮಾಜ್ ಮಾಡಬೇಕು ಅಂತ ಕಾಡಿದ್ದಾರೆ. ಅಲ್ಲದೆ ದುಷ್ಕರ್ಮಿಗಳು ಒತ್ತಾಯ ಪೂರ್ವಕವಾಗಿ ಮಹಿಳೆಗೆ ಬುರ್ಖಾ ಧಾರಣೆ ‌ಮಾಡಿಸಿದ್ದಾರೆ.

ಬಳಿಕ ದುಷ್ಕರ್ಮಿಗಳಿಂದ ಹೇಗೋ ತಪ್ಪಿಸಿಕೊಂಡ ಸಂತ್ರಸ್ತ ಮಹಿಳೆ ಏಳು ಜನ ಆರೋಪಿಗಳ ವಿರುದ್ಧ ಸವದತ್ತಿ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾರೆ. ಮುನವಳ್ಳಿ ಪಟ್ಟಣದ ಆರೀಫ್ ‌ಬೇಪಾರಿ, ಆದೀಲ್, ಶೋಯಲ್, ಮುಕ್ತಮ್, ಉಮರ್, ಕರೆವ್ವ ಕಟ್ಟಿಮನಿ ಹಾಗೂ ಕೌಸರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು