News Karnataka Kannada
Tuesday, April 30 2024
ಬೆಳಗಾವಿ

ಲಕ್ಷ್ಮಣ ಸವದಿ ಆಪ್ತನ ಕೊಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅತ್ಯಾಪ್ತ ಅಣ್ಣಪ್ಪ ನಿಂಬಾಳ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Photo Credit : NewsKarnataka

ಬೆಳಗಾವಿ:  ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅತ್ಯಾಪ್ತ ಅಣ್ಣಪ್ಪ ನಿಂಬಾಳ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಾಂಡೆಗಾಂವ ಗ್ರಾಮದ ವಿಠಲ ಶ್ರವಣಕುಮಾರ ಪೂಜೇರಿ (30), ಶಿರೂರು ಗ್ರಾಮದ ಶಿವಾಜಿ ಲಹು ಹಜಾರೆ (26), ಸುಖದೇವ ರಘುನಾಥ ಹಜಾರೆ (26) ಮತ್ತು ಸಂತೋಷ ಅವಜಿ ಹೊನಮೋರೆ (24) ಬಂಧಿತರು.

ಏಪ್ರೀಲ್‌ 3 ರಂದು ತಡರಾತ್ರಿ ಖೀಳೆಗಾಂವ್‌ ಗ್ರಾಮದ ಹೊರವಲಯದಲ್ಲಿ ಅಣ್ಣಪ್ಪ ಬಸಪ್ಪ ನಿಂಬಾಳ(58) ಅವರ ಮೇಲೆ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ತೀವ್ರವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನಪ್ಪಿದ್ದರು. 20 ಗುಂಟೆ ಜಮೀನು ಸಂಬಂಧ ಇವರು ಪ್ರಭಾವಿ ಕಾಂಗ್ರೆಸ್ ಮುಖಂಡನನ್ನು ಹತ್ಯೆ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. 5 ದಿನದ ಕಾರ್ಯಚರಣೆ ನಂತರ ನಾಲ್ವರು ದುಷ್ಕರ್ಮಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದೀಗೆ ತನಿಖೆ ನಡೆಸುತಿದ್ದಾರೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು