News Karnataka Kannada
Friday, May 03 2024
ಹುಬ್ಬಳ್ಳಿ-ಧಾರವಾಡ

ಯುವಕರ ಶಕ್ತಿಯೇ ದೇಶದ ಶಕ್ತಿ : ಸಚಿವ ಸಂತೋಷ ಲಾಡ್

Youth power is the strength of the country: Santosh Lad
Photo Credit : News Kannada

ಧಾರವಾಡ: ಯುವಕರು ಮಾನವೀಯ ಮೌಲ್ಯಗಳೊಂದಿಗೆ ಸಮಯಪ್ರಜ್ಞೆ ಮತ್ತು ಸಮಯ ಸದುಪಯೋಗದ ಕಲೆ ತಿಳಿದಿರಬೇಕು. ಅಂದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿಗೆ ನೆರವಾಗಲು ಸಹಾಯವಾಗುತ್ತದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ಅವರು ಹೇಳಿದರು.

ಅವರು, ಇಂದು ಬೆಳಿಗ್ಗೆ ನಗರದ ಕರ್ನಾಟಕ ಕಾಲೇಜಿನ ಡಾ.ಅಣ್ಣಾಜಿರಾವ್ ಶಿರೂರು ಸೃಜನಾ ರಂಗಮಂದಿರದಲ್ಲಿ ನೆಹರು ಯುವ ಕೇಂದ್ರ, ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ(ರಿ), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಕಲಾ ಮಹಾವಿದ್ಯಾಲಯ ಹಾಗೂ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವ ಉತ್ಸವ-ಇಂಡಿಯಾ@2047 ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ನೆಹರು ಯುವ ಕೇಂದ್ರವು ಯುವ ಸಮೂಹದಲ್ಲಿರುವ ಸಾಂಸ್ಕತಿಕ, ಕ್ರೀಡೆ, ಕಲೆ, ಚಿತ್ರಕಲೆ, ನೃತ್ಯ ಮತ್ತು ಇತರೆ ವಿಭಾಗಗಳಲ್ಲಿನ ಅವರ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹ ಮಾಡುತ್ತಿದೆ. ವಿವಿಧ ಕ್ರೀಡಾ ಹಾಗೂ ಸಾಂಸ್ಕತಿಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಯುವಕ, ಯುವತಿಯರಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿದೆ ಎಂದು ಸಚಿವರು ತಿಳಿಸಿದರು.

ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಶಕ್ತಿ ಇದ್ದು, ಅದನ್ನು ಉತ್ಪಾದನೆಯ ಸಂಪನ್ಮೂಲವಾಗಿ ಬಳಸಿದರೆ ದೇಶಕ್ಕೆ ಒಂದು ದೊಡ್ಡ ಶಕ್ತಿಯಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾಗದೆ, ಅಗತ್ಯವಿದ್ದಷ್ಟು ಮಾತ್ರ, ಮಿತವಾಗಿ ಬಳಸಬೇಕು. ಅತಿಯಾದ ಮೊಬೈಲ್ ಬಳಕೆ ಮೆದುಳಿನ ಕ್ರಿಯಾಶೀಲತೆ ಕಡಿಮೆ ಮಾಡಿ, ಜ್ಞಾಪಕ ಶಕ್ತಿ ಕುಂದುವಂತೆ ಮಾಡುತ್ತದೆ. ಮೊಬೈಲ್ ಬಳಕೆ ಬಗ್ಗೆ ಎಚ್ಚರವಿರಬೇಕು ಎಂದು ಅವರು ಹೇಳಿದರು.

ಶಾಸಕ ಅರವಿಂದ ಬೆಲ್ಲದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಜನತೆಯು ಉದ್ಯೋಗದಾತ, ಉದ್ಯೋಗನಿರತರು ಉತ್ಪಾದನೆ ಕ್ಷೇತ್ರದ ಒಂದು ಭಾಗವಾದಾಗ ಮಾತ್ರ ದೇಶದ ಶಕ್ತಿ, ಸಂಪತ್ತು ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ ಎಂದರು.

ಯುವಕರು ದೇಶಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ದೇಶ ಉತ್ತಮವಾಗಲು ಸಾಧ್ಯ. ಧಾರವಾಡವು ಸಾಹಿತ್ಯ ಮತ್ತು ಶಿಕ್ಷಣ ಕೇಂದ್ರವಾಗಿದ್ದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಜಿಲ್ಲೆಯಾಗಿದೆ. ನೆಹರು ಯುವ ಕೇಂದ್ರವು ಯುವ ಸಮುದಾಯದಲ್ಲಿರುವ ಕೌಶಲ್ಯವನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ವಲಯದ ನೆಹರು ಯುವ ಕೇಂದ್ರ ಸಂಘಟನೆಯ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಎಂ.ಗೌತಮ ರೆಡ್ಡಿ, ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ.ಬಿ.ಕರಡೋಣಿ, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಂಜಲಿ ಸಾಳುಂಕೆ ಅವರು ಉಪಸ್ಥಿತರಿದ್ದರು.

ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಈರಣ್ಣ ಇಂಜಗನೇರಿ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕ ಪ್ರಕಾಶ ಬಾಳಿಕಾಯಿ ವಂದಿಸಿದರು.

ಕಾರ್ಯಕ್ರಮದಲ್ಲಿ ಭಾಷಣ, ಚಿತ್ರಕಲಾ, ಕವನ ರಚನಾ, ಮೊಬೈಲ್ ಛಾಯಾಚಿತ್ರ, ಸಮೂಹ ನೃತ್ಯ, ಜನಪದ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು