News Karnataka Kannada
Friday, May 03 2024
ಹುಬ್ಬಳ್ಳಿ-ಧಾರವಾಡ

ಯೋಗ ದಿನಾಚರಣೆ: ಸಾಮೂಹಿಕ ಯೋಗಾಭ್ಯಾಸದಲ್ಲಿ ಕೋನರಡ್ಡಿ ಭಾಗಿ

Yoga Day: Konardi participates in mass yoga practice
Photo Credit : News Kannada

ಧಾರವಾಡ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಇಂದು ಬೆಳಿಗ್ಗೆ ನಗರದ ಆರ್‌ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗಾಭ್ಯಾಸ ಜರುಗಿತು.

ಶಾಸಕ ಎನ್.ಎಚ್.ಕೋನರಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಸಸಿಗೆ ನೀರು ಹಾಕಿ, ಸಾಮೂಹಿಕ ಯೋಗಾಭ್ಯಾಸ ಉದ್ಘಾಟಿಸಿದರು. ಧಾರವಾಡ ತಹಶೀಲ್ದಾರ್ ಡಾ.ಮೋಹನ ಭಸ್ನೆ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಪಿ.ಪೂಜಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಸರಶಟ್ಟಿ ಇದ್ದರು. ಯೋಗ ಪಟು ಜಗದೀಶ ಮಳಗಿ ಅವರು ಸಾಮೂಹಿಕ ಯೋಗಾಭ್ಯಾಸದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ಸಾಮೂಹಿಕ ಯೋಗಾಭ್ಯಾಸದಲ್ಲಿ ಪತಂಜಲಿ ಸಂಸ್ಥೆಯ ಯೋಗ ಸಾಧಕರು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿ, ಯೋಗ ಪ್ರದರ್ಶಿಸಿದರು.

ನಂತರ ಯೋಗ ವೇದಿಕೆಯಲ್ಲಿ ಹುಬ್ಬಳ್ಳಿ ನಗರದ ಜನತಾಬಜಾರ ಸರಕಾರಿ ಹಿರಿಯ ಪ್ರಾಥಮಿಕ ಶಾಕೆಯ ಮಕ್ಜಳ ಸಾಹಿತ್ಯ ಪರಿಷತ್ ವಿದ್ಯಾರ್ಥಿಗಳಾದ ಪಲ್ಲಿವಿ ಚಾಕಲಬ್ಬಿ, ಸುಮನ್ ಟೊಪನ್ನವರ, ಪ್ರಿಯಾಂಕಾ, ಅರ್ಚನಾ, ಮನಿಷಾ ಅವರು ಜಾನಪದ ನೃತ್ಯ ಪ್ರದರ್ಶಿಸಿದರು. ಸಂಜೀವ ದುಮಕನಾಳ ನೃತ್ಯ ನಿರ್ದೇಶಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು