ಹುಬ್ಬಳ್ಳಿ: ದುಡ್ಡು ಕೊಟ್ಟು ಪ್ರಯಾಣ ಮಾಡಲು ಹಿಂದೇಟು ಹಾಕುವ ಜನರಿಗೆ ಉಚಿತ ಪ್ರಯಾಣ ಮಾಡಲು ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ತಂದಿದ್ದರೂ ಒಂದೇ ಆಧಾರ ಕಾರ್ಡ್ನಲ್ಲಿ ಇಬ್ಬರು ಮಹಿಳೆಯರು ಪ್ರಯಾಣ ಮಾಡುವ ಮೂಲಕ ನಿರ್ವಾಹಕನ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನೇಕಾರನಗರದಿಂದ ಕಿಮ್ಸ್ ಹೋಗುವ ಬಸ್ಸಿನಲ್ಲಿಯೇ ಒಂದೇ ನಂಬರಿನ ಎರಡು ಆಧಾರ್ ಕಾರ್ಡ್ ತೆಗೆದುಕೊಂಡು ಪ್ರಯಾಣ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ಬಗ್ಗೆ ನಗರ ಸಾರಿಗೆ ಬಸ್ಸಿನ ನಿರ್ವಾಹಕ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಇನ್ನೂ ಶಕ್ತಿ ಯೋಜನೆ ಹೆಸರಲ್ಲಿ ಉಚಿತ ಪ್ರಯಾಣ ನೀಡಿದ್ದರೂ ಒಂದೇ ನಂಬರಿನ ಎರಡು ಆಧಾರ ಕಾರ್ಡನ್ನು ತೆಗೆದುಕೊಂಡು ಓಡಾಡುವುದು ಎಷ್ಟರಮಟ್ಟಿಗೆ ಸರಿ ಎಂಬುವುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.