News Karnataka Kannada
Friday, May 10 2024
ಹುಬ್ಬಳ್ಳಿ-ಧಾರವಾಡ

ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವಿಗೆ ಕೊರತೆ ಇಲ್ಲ: ಡಿಸಿ ದಿವ್ಯ ಪ್ರಭು

ಪ್ರತಿವಾರ ಬರ ಪರಿಸ್ಥಿತಿ ನಿರ್ವಹಣೆ ಕುರಿತು ತಹಶೀಲ್ದಾರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆ ಕುರಿತು ನಿರಂತರವಾಗಿ ಪ್ರಗತಿ ಪರಿಶೀಲನೆ ಮಾಡುತ್ತಿರುವುದರಿಂದ ಎಲ್ಲಾ ಅಧಿಕಾರಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ತಮ್ಮ ತಾಲೂಕಿನ ಸಮಸ್ಯೆಗಳಿಗೆ ನಿಗದಿತ ಸಮಯದಲ್ಲಿ ಸ್ಪಂದಿಸಿ ಪರಿಹರಿಸುತ್ತಿದ್ದಾರೆ.
Photo Credit : NewsKarnataka

ಧಾರವಾಡ: ಪ್ರತಿವಾರ ಬರ ಪರಿಸ್ಥಿತಿ ನಿರ್ವಹಣೆ ಕುರಿತು ತಹಶೀಲ್ದಾರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆ ಕುರಿತು ನಿರಂತರವಾಗಿ ಪ್ರಗತಿ ಪರಿಶೀಲನೆ ಮಾಡುತ್ತಿರುವುದರಿಂದ ಎಲ್ಲಾ ಅಧಿಕಾರಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ತಮ್ಮ ತಾಲೂಕಿನ ಸಮಸ್ಯೆಗಳಿಗೆ ನಿಗದಿತ ಸಮಯದಲ್ಲಿ ಸ್ಪಂದಿಸಿ ಪರಿಹರಿಸುತ್ತಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಉತ್ತಮವಾಗಿದೆ. ತಹಸಿಲ್ದಾರ ಮತ್ತು ಇತರ ಅಧಿಕಾರಿಗಳು ಪ್ರತಿದಿನ ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ, ಅಹವಾಲುಗಳಿಗೆ ಸ್ಪಂದಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರರು, ತಾಲೂಕು ಪಂಚಾಯತ ಇಓ ಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಧಾರವಾಡ ಜಿಲ್ಲೆಯ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ಮೇವು ಸಂಗ್ರಹಣೆ ಹಾಗೂ ಬೆಳೆಹಾನಿ ಪರಿಹಾರ ಪ್ರಗತಿ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.

ಕುಡಿಯುವ ನೀರಿನ ಕೊರತೆ ಆಗುವ ಸಂಭವವಿಯ ಗ್ರಾಮಗಳನ್ನು ಈ ಹಿಂದೆಯೇ ಗುರುತಿಸಲಾಗಿತ್ತು. ಅದರಂತೆ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ, ಅಗತ್ಯ ಕ್ರಿಯಾ ಯೋಜನೆ ಮಾಡಿಕೊಳ್ಳಲಾಗಿತ್ತು. ಅದರಂತೆ ಈಗ ಕ್ರಮ ಕೈಗೊಳ್ಳಲಾಗುತ್ತಿದೆ, ಯಾವುದೇ ರೀತಿಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊರತೆ ಕಂಡುಬಂದ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ತಹಶೀಲ್ದಾರರು ತಾ.ಪಂ. ಇಓ ಅವರೊಂದಿಗೆ ತಮ್ಮ ತಾಲೂಕಿನ ಪ್ರತಿ ಗ್ರಾಮಗಳಿಗೆ ಭೇಟಿ ನೀಡಬೇಕು. ಭೇಟಿ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು, ಗ್ರಾಮದ ಪ್ರಮುಖರ ಸಭೆ ಜರಗಿಸಿ, ಕುಡಿಯುವ ನೀರು, ದನ ಕರುಗಳಿಗೆ ಮೇವು ಮತ್ತು ನರೇಗಾ ಕೂಲಿ ಕೆಲಸದ ಬಗ್ಗೆ ಸಲಹೆ ಮಾಹಿತಿ ಪಡೆದುಕೊಳ್ಳಬೇಕು. ಅವರ ಅಗತ್ಯಕ್ಕೆ ಅನುಗುಣವಾಗಿ ನಿಯಮಾನುಸಾರ ಕುಡಿಯುವ ನೀರು ಮತ್ತು ಮೇವು ಪೂರೈಕೆಗೆ ಕ್ರಮವಹಿಸಬೇಕೆಂದು ಅವರು ಹೇಳಿದರು.

ಬರ ಪರಿಸ್ಥಿತಿ ಮತ್ತು ಸಾರ್ವತ್ರಿಕ ಚುನಾವಣೆ ಸಮಯವಾಗಿರುವುದರಿಂದ ಸಂಬಂಧಿಸಿದ ಗ್ರಾಮ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಯಾ ಪಿ.ಡಿ.ಓ ಮತ್ತು ಗ್ರಾಮ ಆಡಳಿತ ಅಧಿಕಾರಿ ಕಡ್ಡಾಯವಾಗಿ ಸ್ಥಾನಿಕವಾಗಿ ಇದ್ದು, ಜನರಿಗೆ ತಕ್ಷಣ ಲಭ್ಯರಾಗಬೇಕು.

ಗ್ರಾಮದ ಯಾವುದೇ ಸಮಸ್ಯೆ ಬೇಡಿಕೆಗಳಿದ್ದಲ್ಲಿ ಗ್ರಾಮ ಮಟ್ಟದಿಂದ ತಕ್ಷಣ ತಹಸಿಲ್ದಾರರು ವರದಿ ಪಡೆದು ಕ್ರಮವಹಿಸಬೇಕು. ಕ್ಷೇತ್ರ ಮಟ್ಟದ ಅಧಿಕಾರಿಗಳು ಸ್ಥಾನಿಕವಾಗಿ ಸದಾ ಕಾಲ ಲಭ್ಯವಿರುವಂತೆ ನೋಡಿಕೊಳ್ಳುವುದು ತಾಲೂಕಿನ ಹಿರಿಯ ಅಧಿಕಾರಿಗಳ, ಜವಾಬ್ದಾರಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಹೆಚ್ಚು ಪ್ರಮಾಣದಲ್ಲಿ ನೀರು ಪೂರೈಕೆ ಸಾಮಥ್ರ್ಯವಿರುವ ಕೊಳವೆ ಬಾವಿಗಳನ್ನು ಗುರುತಿಸಿ, ನೀರು ಪೂರೈಕೆ ಒಪ್ಪಂದ ಮಾಡಿಕೊಳ್ಳಿ. ಗ್ರಾಮಗಳಲ್ಲಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ. ಜನರಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಿತವಾಗಿ ನೀರು ಬಳಸಲು ಗ್ರಾಮ ಮಟ್ಟದಲ್ಲಿ, ವಾರ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಿ ಎಂದು ಅವರು ಹೇಳಿದರು.

ತಾಲೂಕುಗಳ ಗಡಿ ಗ್ರಾಮಗಳಲ್ಲಿ ಮೇವು, ಕುಡಿಯುವ ನೀರು ಸಮಸ್ಯೆ ಇದ್ದಾಗ ಪರಸ್ಪರ ಸಮನ್ವಯದಿಂದ ಪರಿಹರಿಸಿ. ಕುಡಿಯುವ ನೀರು ಪೂರೈಕೆಗೆ ಒಪ್ಪಂದವಾಗಿರುವ ಕೊಳವೆ ಬಾವಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕವಿದ್ದು, ವಿದ್ಯುತ್ ಪೂರೈಕೆ ಹೆಚ್ಚಳಕ್ಕೆ ಹೆಸ್ಕಾಂ ಗೆ ಪತ್ರ ಬರೆಯಲಾಗುವುದು ಎಂದರು.

ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲ ಆರ್.ಓ ಪ್ಲಾಂಟ್ ಗಳನ್ನು ದುರಸ್ತಿ ಮಾಡಿ. ಅನುಮತಿಗಾಗಿ ಕಾಯದೆ, ಸ್ಥಳದಲ್ಲಿಯೇ ಪರಿಶೀಲಿಸಿ, ಕ್ರಮ ಅಗತ್ಯವಾಗಿದ್ದರೆ ಕೈಗೊಂಡು ನಿಯಮಾನುಸಾರ ವರದಿ ಸಲ್ಲಿಸಿ ಎಂದು ಅವರು ತಿಳಿಸಿದರು.

ರೈತರ ಬೇಡಿಕೆ ಇದ್ದಲ್ಲಿ, ರೊಟ್ಟಿಗವಾಡ, ಮೊರಬ ಮತ್ತು ಅಮರಗೋಳದಲ್ಲಿ ಮೇವು ದಾಸ್ತಾನು ಮಾಡಿ, ರೈತರ ಬೇಡಿಕೆಗೆ ಅನುಗುಣವಾಗಿ ಮೇವು ಪೂರೈಸಿ. ಸಾರ್ವಜನಿಕರು ಇಂತಹ ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೇಳಿ ಡಿಸಿ ಕಚೇರಿಯವರಿಗೆ ಬರದಂತೆ, ಕ್ರಿಯಾಶೀಲವಾಗಿ ತಾವೇಲ್ಲರೂ ಕೆಲಸ ಮಾಡಿ. ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಜನರ ಬೇಡಿಕೆಗಳಿಗೆ ಸ್ಪಂದಿಸಿದರೆ ಉತ್ತಮ ಆಡಳಿತ ನೀಡಲು ಅನುಕೂಲವಾಗುತ್ತದೆ. ತಹಶೀಲ್ದಾರರು ಕಡ್ಡಾಯವಾಗಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಕುಡಿಯುವ ನೀರಿನ ಸರಬರಾಜು ವಿವರ:
ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಪೂರ್ವದಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಸಮೀಕ್ಷಿಸಿ, ಅಂದಾಜಿಸಿ, 153 ಗ್ರಾಮಗಳನ್ನು ಗುರುತಿಸಿ ಮುಂಜಾಗೃತಿ ವಹಿಸಲಾಗಿದೆ. ಈಗಾಗಲೇ ಈ ಪೈಕಿ 26 ಗ್ರಾಮಗಳಿಗೆ ಖಾಸಗಿ ಬೋರವೆಲ್‍ಗಳ ಮೂಲಕ ಪ್ರಸ್ತುತ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಒಟ್ಟಾರೆ ಜಿಲ್ಲೆಯ 153 ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ಅಗತ್ಯವಿದ್ದಲ್ಲಿ ಕುಡಿಯುವ ನೀರು ಪೂರೈಕೆಗೆ 311 ಖಾಸಗಿ ಬೋರವೆಲ್‍ಗಳನ್ನು ಗುರುತಿಸಿ, ಕೊಳವೆಬಾವಿಗಳ ಮಾಲೀಕರದಿಗೆ ಕುಡಿಯುವ ನೀರು ಪೂರೈಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಧಾರವಾಡ ತಾಲೂಕಿನ ಒಟ್ಟು 115 ಗ್ರಾಮಗಳ ಪೈಕಿ 37 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಅಂದಾಜಿಸಿ ಗುರುತಿಸಲಾಗಿತ್ತು. ಈಗಾಗಲೇ ಈ ಪೈಕಿ 9 ಗ್ರಾಮಗಳಿಗೆ 12 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಮತ್ತು ಒಟ್ಟಾರೆಯಾಗಿ 36 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಅವುಗಳ ಮಾಲೀಕರಿಂದ ಅಗತ್ಯವಿದಾಗ ಕುಡಿಯುವ ನೀರು ಪೂರೈಕೆಗಾಗಿ ಒಪ್ಪಿಗೆ ಪತ್ರವನ್ನು ಪಡೆಯಲಾಗಿದೆ.

ಅಳ್ನಾವರ ತಾಲೂಕಿನ ಒಟ್ಟು 13 ಗ್ರಾಮಗಳ ಪೈಕಿ 2 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಅಂದಾಜಿಸಿ ಗುರುತಿಸಲಾಗಿತ್ತು. ಈಗಾಗಲೇ ಈ ಪೈಕಿ 1 ಗ್ರಾಮಕ್ಕೆ 1 ಖಾಸಗಿ ಕೊಳವೆ ಬಾವಿಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಮತ್ತು ಒಟ್ಟಾರೆಯಾಗಿ 2 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಅವುಗಳ ಮಾಲೀಕರಿಂದ ಅಗತ್ಯವಿದಾಗ ಕುಡಿಯುವ ನೀರು ಪೂರೈಕೆಗಾಗಿ ಒಪ್ಪಿಗೆ ಪತ್ರವನ್ನು ಪಡೆಯಲಾಗಿದೆ.

ಹುಬ್ಬಳ್ಳಿ ತಾಲೂಕಿನ ಒಟ್ಟು 46 ಗ್ರಾಮಗಳ ಪೈಕಿ 17 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಅಂದಾಜಿಸಿ ಗುರುತಿಸಲಾಗಿದ್ದು, ಈಗಾಗಲೇ ಈ ಪೈಕಿ 3 ಗ್ರಾಮಗಳಿಗೆ 3 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಮತ್ತು ಒಟ್ಟಾರೆಯಾಗಿ 48 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಅವುಗಳ ಮಾಲೀಕರಿಂದ ಅಗತ್ಯವಿದಾಗ ಕುಡಿಯುವ ನೀರು ಪೂರೈಕೆಗಾಗಿ ಒಪ್ಪಿಗೆ ಪತ್ರವನ್ನು ಪಡೆಯಲಾಗಿದೆ.

ಕಲಘಟಗಿ ತಾಲೂಕಿನ ಒಟ್ಟು 87 ಗ್ರಾಮಗಳ ಪೈಕಿ 81 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಅಂದಾಜಿಸಿ ಗುರುತಿಸಲಾಗಿತ್ತು. ಈಗಾಗಲೇ ಈ ಪೈಕಿ 14 ಗ್ರಾಮಗಳಿಗೆ 26 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಮತ್ತು ಒಟ್ಟಾರೆಯಾಗಿ 190 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ, ಅವುಗಳ ಮಾಲೀಕರಿಂದ ಅಗತ್ಯವಿದಾಗ ಕುಡಿಯುವ ನೀರು ಪೂರೈಕೆಗಾಗಿ ಒಪ್ಪಿಗೆ ಪತ್ರವನ್ನು ಪಡೆಯಲಾಗಿದೆ.

ಕುಂದಗೋಳ ತಾಲೂಕಿನ ಒಟ್ಟು 57 ಗ್ರಾಮಗಳ ಪೈಕಿ 15 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಅಂದಾಜಿಸಿ ಗುರುತಿಸಲಾಗಿತ್ತು. ಈಗಾಗಲೇ ಈ ಪೈಕಿ 1 ಗ್ರಾಮಕ್ಕೆ 1 ಖಾಸಗಿ ಕೊಳವೆ ಬಾವಿಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಮತ್ತು ಒಟ್ಟಾರೆಯಾಗಿ 33 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಅವುಗಳ ಮಾಲೀಕರಿಂದ ಅಗತ್ಯವಿದಾಗ ಕುಡಿಯುವ ನೀರು ಪೂರೈಕೆಗಾಗಿ ಒಪ್ಪಿಗೆ ಪತ್ರವನ್ನು ಪಡೆಯಲಾಗಿದೆ.

ಅಣ್ಣಿಗೇರಿ ತಾಲೂಕಿನ ಒಟ್ಟು 19 ಗ್ರಾಮಗಳ ಪೈಕಿ 1 ಗ್ರಾಮವನ್ನು ಸಮಸ್ಯಾತ್ಮಕ ಗ್ರಾಮವೆಂದು ಅಂದಾಜಿಸಿ ಗುರುತಿಸಲಾಗಿದೆ. ಹಾಗೂ 2 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಅವುಗಳ ಮಾಲೀಕರಿಂದ ಅಗತ್ಯವಿದಾಗ ಕುಡಿಯುವ ನೀರು ಪೂರೈಕೆಗಾಗಿ ಒಪ್ಪಿಗೆ ಪತ್ರವನ್ನು ಪಡೆಯಲಾಗಿದೆ.

ಒಟ್ಟಾರೆಯಾಗಿ ಜಿಲ್ಲೆಯ 395 ಗ್ರಾಮಗಳ ಪೈಕಿ 153 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಅಂದಾಜಿಸಿ ಗುರುತಿಸಲಾಗಿತ್ತು. ಈಗಾಗಲೇ ಈ ಪೈಕಿ 28 ಗ್ರಾಮಗಳಿಗೆ 43 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಮತ್ತು ಒಟ್ಟಾರೆಯಾಗಿ 311 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಅವುಗಳ ಮಾಲೀಕರಿಂದ ಅಗತ್ಯವಿದ್ದಾಗ ಕುಡಿಯುವ ನೀರು ಪೂರೈಕೆಗಾಗಿ ಒಪ್ಪಿಗೆ ಪತ್ರವನ್ನು ಪಡೆಯಲಾಗಿದೆ.

ನವಿಲು ತೀರ್ಥ ಜಲಾಶಯದಿಂದ ಎಂಆರ್‍ಬಿಸಿ ಕಾಲುವೆ ಮುಖಾಂತರ ಜಿಲ್ಲೆಯ ನವಲಗುಂದ ತಾಲೂಕಿನ 37, ಅಣ್ಣಿಗೇರಿ ತಾಲೂಕಿನ 13, ಹುಬ್ಬಳ್ಳಿ ತಾಲೂಕಿನ 7 ಮತ್ತು ಕುಂದಗೋಳ ತಾಲೂಕಿನ 1 ಕೆರೆಗಳು ಸೇರಿ ಒಟ್ಟು 58 ಕೆರೆಗಳಿಗೆ ಕುಡಿಯುವ ನೀರಿನ ಪೂರೈಕೆಗಾಗಿ ನೀರು ತುಂಬಿಸಲಾಗಿದೆ. ಮೇ ತಿಂಗಳವರೆಗೆ ಈ 58 ಕೆರೆಗಳಿರುವ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವದಿಲ್ಲ ಎಂದು ಅವರು ಹೇಳಿದರು.

ಮೇವು ಸಂಗ್ರಹಣೆಯ ವಿವರ
ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಪೂರ್ವದಲ್ಲಿ ಮೇವು ಸಂಗ್ರಹಣೆಯ ಕಾರ್ಯವನ್ನು ಮಾಡಲಾಗಿದ್ದು, ಧಾರವಾಡ ತಾಲೂಕಿನ ಮಾದನಬಾವಿ ಮತ್ತು ಹುಬ್ಬಳ್ಳಿ ತಾಲೂಕಿನ ಶಿರಾಗುಪ್ಪಿ ಗ್ರಾಮದಲ್ಲಿ ಮೇವು ಬ್ಯಾಂಕ ತೆರೆಯಲಾಗಿದ್ದು, ಅವಶ್ಯಕತೆ ಕಂಡುಬಂದರೆ ಉಳಿದ ತಾಲೂಕುಗಳಲ್ಲಿ ಮೇವು ಬ್ಯಾಂಕ್ ಅಥವಾ ಗೋಶಾಲೆಯನ್ನು ತೆರೆಯಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಧಾರವಾಡ ತಾಲೂಕಿನಲ್ಲಿ 31,339 ಟನ್, ಅಳ್ನಾವರ ತಾಲೂಕಿನಲ್ಲಿ 513 ಟನ್, ಹುಬ್ಬಳ್ಳಿ ನಗರ ತಾಲೂಕಿನಲ್ಲಿ 8,095 ಟನ್, ಹುಬ್ಬಳ್ಳಿ ತಾಲೂಕಿನಲ್ಲಿ 5,660 ಟನ್, ಕಲಘಟಗಿ ತಾಲೂಕಿನಲ್ಲಿ 21,321 ಟನ್, ಕುಂದಗೋಳ ತಾಲೂಕಿನಲ್ಲಿ 13,031 ಟನ್, ನವಲಗುಂದ ತಾಲೂಕಿನಲ್ಲಿ 5,575 ಟನ್ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ 11,896 ಟನ್ ಸೇರಿ ಒಟ್ಟಾರೆಯಾಗಿ 97,448 ಟನ್ ಮೇವು ಸಂಗ್ರಹಣೆ ಮಾಡಲಾಗಿದ್ದು ಜಿಲ್ಲೆಯಲ್ಲಿ ಮುಂದಿನ 9 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ ಎಂದು ಅವರು ಹೇಳಿದರು.

ಬರ ನಿರ್ವಹಣೆಗಾಗಿ ಸಹಾಯವಾಣಿ ಕೆಂದ್ರಗಳ ವಿವರ
ಸರಕಾರವು ಜಿಲ್ಲೆಯನ್ನು ಸಂಪೂರ್ಣ ಬರಪಿಡೀತ ಜಿಲ್ಲೆ ಎಂದು ಘೋಷಿಸಿದೆ. ಸಾರ್ವಜನಿಕರು ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಯಾವುದೇ ಕುಂದುಕೊರತೆಗಳಿದ್ದರೂ ಸಹಾಯವಾಣಿಗಳನ್ನು ಸಂಪರ್ಕಿಸಬಹುದು.

ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಹಾಯವಾಣಿ: 0836-2233880, ಅಣ್ಣಿಗೇರಿ- 9008249981, ಹುಬ್ಬಳ್ಳಿ ನಗರ- 0836-2358035, ಅಳ್ನಾವರ – 0836-2385544, ನವಲಗುಂದ – 08380-229240, ಕುಂದಗೋಳ – 0804-290239, ಹುಬ್ಬಳ್ಳಿ – 0836-2233844, ಧಾರವಾಡ – 0836-2233822, ಕಲಘಟಗಿ – 08370-284535 ಈ ಎಲ್ಲ ತಹಶೀಲ್ದಾರ ಕಾರ್ಯಲಯಗಳಿಗೆ ಸಂಪರ್ಕಿಸ ಬಹುದು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರತಿವಾರ ಎಲ್ಲ ತಾಲೂಕ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳ ಸದಸ್ಯರೊಂದಿಗೆ ಸಭೆಯನ್ನು ಜರುಗಿಸಿ ಬರ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಆರ್.ಎಂ ಸೋಪ್ಪಿಮಠ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ.ಎಸ್, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ ಕುಮಾರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ಸಿ. ಬದ್ರಣ್ಣವರ, ಪಶುಪಾಲನೆ ಮತ್ತು ಪಶವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ ಹಾಗೂ ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತಗಳ ಕಾರ್ಯನಿರ್ವಹಕ ಅಧಿಕಾರಿಗಳು, ನರೇಗಾ ಯೋಜನೆ ಸಹಾಯಕ ನಿರ್ದೇಶಕರು, ವಿವಿಧ ಇಲಾಖೆಗಳ ಇಂಜನಿಯರಗಳು, ಅಧಿಕಾರಿಗಳು ಭಾಗವಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು