ಹುಬ್ಬಳ್ಳಿ: ಕಳೆದ ಮೂರ್ನಾಲ್ಕು ದಿನಗಳಿಂದ ಜಿಟಿ ಜಿಟಿ ಮಳೆಗೆ ಜನ ಹೈರಾಣಾಗಿದ್ದಾರೆ. ಇಷ್ಟು ದಿನ ಬಿಸಿಲು ಬೇಗೆಯಿಂದ ಥತ್ತರಿಸಿದ್ದ ಜನ ಇದೀಗ ಜಿಟಿ ಜಿಟಿ ಮಳೆಗೆ ಕಂಗಾಲಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಥೇಟ್ ಮಲೆನಾಡಿನಂತೆ ಮಳೆ ಸುರಿಯುತ್ತಿದೆ. ಜಿಟಿ ಜಿಟಿ ಮಳೆಗೆ ಜನ ಕಂಗಾಲಾಗಿದ್ದು ಬಿಸಲು ಮರೀಚಿಕೆಯಾಗಿದೆ.
ಹುಬ್ಬಳ್ಳಿ ಜನ ಅಸಲಿಗೆ ಸೂರ್ಯನ ಮುಖವನ್ನೆ ನೋಡಿಲ್ಲ. ಬಿಟ್ಟು ಬಿಡದೆ ಸುರಿಯುತ್ತಿರೋ ಮಳೆಗೆ ಜನ ಕಂಗಾಲಾಗಿದ್ದು, ಮನೆಯಿಂದ ಹೊರಬರೋಕೆ ಹೆದರುತ್ತಿದ್ದಾರೆ. ಇಷ್ಟು ದಿನ ಮಳೆ ಮುಖ ನೋಡದ ಜನರಿಗೆ ಇದೀಗ ಮಳೆ ಬೇಸರ ತರಿಸಿದೆ. ಇಷ್ಟು ದಿನ ಮಳೆಗಾಗಿ ಜನ ಹರಕೆ ಹೊತ್ತಿದ್ರು. ಆದ್ರೆ ಇದೀಗ ಬಿಟ್ಟು ಬಿಡದೆ ಸುರಿಯುತ್ತಿರೋ ಮಳೆ ಅಕ್ಷರಶಃ ಹುಬ್ಬಳ್ಳಿ ಜನರನ್ನು ಹೈರಾಣಾಗಿಸಿದೆ. ಜನ ಕೊಡೆ ಬಿಟ್ಟು ಹೊರಗ ಬರ್ತಿಲ್ಲ. ಥೇಟ್ ಹುಬ್ಬಳ್ಳಿ ಮಲೆನಾಡಿನಂತಾಗಿದೆ. ಐದು ನಿಮಿಷ ಬಿಡುವು ಕೊಟ್ರೆ, ಮತ್ತೆ ಐದು ನಿಮಿಷದಲ್ಲಿ ವರುಣ ಅಬ್ಬರಿಸಿ ಬೊಬ್ಬರಿಯುತ್ತಿದ್ದಾನೆ. ಬೆಳಗಿನಿಂದ ಹಿಡಿದು ರಾತ್ರಿವರೆಗೂ ವರುಣ ಧೋ ಎಂದು ಸುರಿಯುತ್ತಿದೆ.