ಧಾರವಾಡ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ 2023-24ನೇ ಸಾಲಿನ ಜುಲೈ ಆವೃತ್ತಿಯ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂ.ಬಿ.ಎ, ಬಿ.ಲಿಬ್.ಸೈನ್ಸ್, ಎಂ.ಲಿಬ್.ಸೈನ್ಸ್, ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ ಎಂ.ಸಿ.ಎ., ಡಿಪ್ಲೋಮಾ, ಕೋರ್ಸ್ಗಳ ಪ್ರಥಮ ವರ್ಷದ ಪ್ರವೇಶಾತಿ ಪ್ರಾರಂಭಗೊಂಡಿವೆ.
ಆಸಕ್ತ ವಿದ್ಯಾರ್ಥಿಗಳು ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯಲು ಹಾಗೂ ಶುಲ್ಕ ಪಾವತಿಸಲು ಸೆಪ್ಟೆಂಬರ್ 30,2023 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಂತರ್ಜಾಲ www.ksoumysuru.ac.in ಗೆ ಮತ್ತು ಆನ್ಲೈನ್ ಸಹಾಯವಾಣಿ ಸಂಖ್ಯೆ: 8690544544, 8800335638, ಅಥವಾ ಖುದ್ದಾಗಿ ಕರಾಮುವಿ, ಪ್ರಾದೇಶಿಕ ಕೇಂದ್ರ, ಎಲ್.ಐ.ಸಿ. ಕಛೇರಿ ಎದುರು, ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ ಕ್ಯಾಂಪಸ್, ಕೆ.ಸಿ.ಡಿ.ರಸ್ತೆ, ಧಾರವಾಡ ಮತ್ತು ಕಛೇರಿಯ ದೂರವಾಣಿ ಸಂಖ್ಯೆ: 0836-2441199 ಯನ್ನು ಸಂಪರ್ಕಿಸ ಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.