News Karnataka Kannada
Monday, May 20 2024
ಹುಬ್ಬಳ್ಳಿ-ಧಾರವಾಡ

ಫಯಾಜ್ ನನ್ನು ಸಾರ್ವಜನಿಕವಾಗಿ ಗಲ್ಲಿಗೆರಿಸಿ ಧರ್ಮರಕ್ಷಣೆಗೆ ಮುಂದಾಗಿ: ದಾನು ಪತಾಟೆ

New Project (2)
Photo Credit : NewsKarnataka

ಅಫಜಲಪುರ: ಹುಬ್ಬಳ್ಳಿಯ ಬೂಮರಡ್ಡಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಭಯಾನಕ ಕೊಲೆ ರಾಜ್ಯವನ್ನೆ ಬೆಚ್ಚಿಬಿಳಿಸಿದೆ‌.ಹಲವು ಗೊಂದಲಗಳಿಗೆ ಎಡೆಮಾಡಿದ ಕೊಲೆ ಪ್ರಕರಣದಲ್ಲಿ ಅಮಾನವೀಯ ಎತ್ತಿತೊರುತ್ತದೆ.ಆದರೆ ಹಿಂತಹ ಘನಘೋರ ಕೊಲೆಯಿಂದ ರಾಜ್ಯದಲ್ಲಿ ಸಾಮಾನ್ಯ ಮಹಿಳೆಯರು ಉಸುರುಗಟ್ಟಿ ನಿಲ್ಲುವಂತಾಗಿದೆ.

ಅಫಜಲಪುರ ಪಟ್ಟಣದಲ್ಲಿಂದು ಶ್ರೀರಾಮ ಸೇನೆ ತಾಲೂಕು ಘಟಕದ ವತಿಯಿಂದ ನೇಹಾ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು. ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಚೇರಿಯ ವರೆಗೆ ಪ್ರತಿಭಟನಾ ಯ್ರಾಲಿ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡ ದಾನು ಪತಾಟೆ ರಾಜ್ಯದಲ್ಲಿ ಹಿಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗುತ್ತಿದೆ.ಸಾಮಾನ್ಯ ಜನರ ಬದುಕು ಭಯಾನಕವೆನಿಸುತ್ತಿದೆ. ಹುಬ್ಬಳ್ಳಿಯಲ್ಲಿ ಸಹೋದರಿ ನೇಹಾ ಹಿರೇಮಠ ಅವರಿಗೆ 9 ಬಾರಿ ಚಾಕುವಿನಿಂದ ಇರಿದು ಆರೋಪಿ ಪರಾರಿಯಾಗಿದ್ದಾನೆ. ಹಾಡುಹಗಲೆ ಹಿಂತಹ ಕೃತ್ಯಗಳು ನಡೆಯುತ್ತೆದ್ದರೂ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುತ್ತಿಲ್ಲ.ಹಿಂತಹ ಕೃತ್ಯಗಳನ್ನೆ ಎಸಗಿದ ನಿಚರಿಗೆ ಗಲ್ಲು ಶಿಕ್ಷೆಯಾಗಬೇಕು.ಬಹಿರಂಗವಾಗಿ ಗಲ್ಲಿಗೇರಿಸಿದ್ದಾಗ ಮಾತ್ರ ಹಿಂತವರಿಗೆ ಭಯ ಹುಟ್ಟುತ್ತದೆ.ಇಲ್ಲವಾದರೆ ಪ್ರತಿ ದಿನವೂ ಹಿಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.ಕೊಲೆ ಮಾಡಿರುವ ಆರೋಪಿಗಳು ಎರಡ್ಮೂರು ತಿಂಗಳಲ್ಲಿ ಜೈಲಿಂದ ಹೊರಗಡೆ ಬಂದು ರಾಜಾರೋಷವಾಗಿ ಓಡಾಡುತ್ತಾರೆ ಎಂದರೆ ನಮ್ಮ ಕಾನೂನು ಯಾವ ರೀತಿಯಾಗಿದೆ ಎಂದು ನಾವೇಲ್ಲರೂ ಯೋಚಿಸಬೇಕು ಎಂದರು.

ಅದಲ್ಲದೇ ನಮ್ಮ ಮಠಾಧೀಶರು ಎಲ್ಲರೂ ಒಗ್ಗಟ್ಟಾಗಿ ಹೊರಗಡೆ ಬಂದು ಪ್ರತಿಭಟನೆ ಮಾಡಬೇಕು.ಹೆಣ್ಣು ಮಕ್ಕಳಿಗೆ ಸಂಸ್ಕಾರ ಕಲಿಸುವ ನಿಟ್ಟಿನಲ್ಲಿ ನೀವು ಭೋಧನೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ಬಸವರಾಜ ಹಿಂದು ರಾಮ ಭಕ್ತರು ಕಾನೂನು ಕೈಗೆ ತಗೆದುಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಕಾನೂನಿಗೆ ಬೆಲೆಕೊಟ್ಟು ಸುಮ್ಮನಿದ್ದೆವೆ. ಹಿಂತಹ ಘಟನೆಗಳಿಗೆ‌ ಕಡಿವಾಣ ಹಾಕದಿದ್ದರೆ ರಕ್ತಕ್ಕೆ ರಕ್ತವೇ ಹರಿಸಲು ಹಿಂದುಗಳು ಮುಂದಾಗಬೇಕಾಗುತ್ತದೆ.ಕೂಡಲೇ ಫಯಾಜ್ ಎನ್ನುವಂತಹ ನೀಚ ನಾಯಿಗೆ ಬಹಿರಂಗವಾಗಿ ಗಲ್ಲಿಗೇರಿಸಿ ಇನ್ನೂಳಿದ ಕೊಲೆಗಡುಕರಿಗೆ ಎಚ್ಚರಿಕೆ ಕರೆಗಂಟೆ ನೀಡಬೇಕು.ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಮಾಡುವುದು ನಮಗಷ್ಟೆ ಅಲ್ಲ ನೀವು ಮಾಡುವಂತಹ ಪರಸ್ಥಿತಿ ನಿರ್ಮಾಣ ಮಾಡಲು ನಾವೇನೂ ಸುಮ್ಮನ್ನೆ ಕುಳಿತ್ತಿಲ್ಲ ಎಂದರು.

ನಂತರ ಮಾತನಾಡಿದ ಮರುಳರಾಧ್ಯ ಶ್ರೀಗಳು ದೇಶದಲ್ಲಿ ಹಿಂದುತ್ವದ ಅಲೆ ಎದ್ದಿರುವುದು ಅನ್ಯಕೋಮಿಗರಿಗೆ ಸಹಿಸಿಕೊಳ್ಳಲಾಗದೆ ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದಾರೆ.ಹಿಂದುಗಳು ಸಮರಕ್ಕೂ ಸಿದ್ದ ಶಾಂತಿಗೂ ಬದ್ದರಿದ್ದಾರೆ.ನೇಹಾ ಹಿರೇಮಠ ಯುವತಿಗೆ ಹಾಡುಹಗಲೇ ಸಾವಿರಾರು ವಿದ್ಯಾರ್ಥಿಗಳ ಮಧ್ಯೆ ಒಂಭತ್ತು ಬಾರಿ ಚುಚ್ಚಿ ಸಾಹಿಸುತ್ತಾನೆ ಎಂದರೆ ಹಿಂದು ಮಹಿಳೆಯರಿಗೆ ಎಲ್ಲಿದೆ ಸುರಕ್ಷತೆ? ಆ ಪ್ರಕರಣದಲ್ಲಿ ನಿಷ್ಪಕ್ಷಪಾತದಿಂದ ನೇಹಾಳಿಗೆ ನ್ಯಾಯ ಒದಗಿಸಿ ಕೊಡಬೇಕಿ. ಈ ಕೊಲೆ ಮಾಡಿರುವ ಹಂತಕನಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ನಂತರ ತಹಶೀಲ್ದಾರ ಮುಖಾಂತರ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಇದೆ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಿಂಗದಳ್ಳಿ,ವಿಶ್ವನಾಥ ಉಡಚಾಣ, ಪ್ರಭಾವತಿ ಮೇತ್ರೆ,ಸುನೀಲ ಶೆಟ್ಟಿ,ಪ್ರತಿಭಾ ಮಹೇಂದ್ರಕರ,ವಿನೋದ ರಾಠೋಡ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು