ಧಾರವಾಡ: ನಗರದಲ್ಲಿ ಮಾದಕ ವ್ಯಸನ ವಿರೋಧಿ ದಿನಾಚರಣೆ ಜಾಥಾದಲ್ಲಿ ನಗರದ ಕಾಲೇಜಿನ 5ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಾಥಾ ನಂತರ ಮೈದಾನದಲ್ಲಿ ವಿದ್ಯಾರ್ಥಿಗಳು ವಿವಿಧ ಹಾಡಿಗೆ ನೃತ್ಯ ಮಾಡಿ ಖುಷಿ ಪಟ್ಟರು. ಈ ಸಂದರ್ಭದಲ್ಲಿ ಮಕ್ಕಳ ನೃತ್ಯಕ್ಕೆ ಪೊಲೀಸ್ ಅಧಿಕಾರಿಗಳು ಕೂಡಾ ನೃತ್ಯ ಮಾಡಿ ಸಾಥ್ ನೀಡಿದರು. ನಂತರ ಯುವಕರು ಹಾಗೂ ಯುವತಿಯರಿಗೆ ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು.