News Karnataka Kannada
Sunday, April 28 2024
ಹುಬ್ಬಳ್ಳಿ-ಧಾರವಾಡ

ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎಸ್. ಜೈನ್ ಅಧಿಕಾರ ಸ್ವೀಕಾರ

ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎಸ್. ಜೈನ್ ಅವರು ಅಧಿಕಾರ ವಹಿಸಿಕೊಂಡರು. ಕೆ.ಎಸ್. ಜೈನ್ ಅವರು ರೂರ್ಕಿ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು 1987 ರಲ್ಲಿ ಪಡೆದಿದ್ದಾರೆ. ಇಂಡಿಯನ್ ರೈಲ್ವೆ ಸರ್ವಿಸ್ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್ (IRSME) 1988 ರ ಬ್ಯಾಚ್ ನ ಅಧಿಕಾರಿಯಾಗಿ ರೈಲ್ವೆಯಲ್ಲಿ ಸೇರಿದರು.
Photo Credit : News Kannada

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎಸ್. ಜೈನ್ ಅವರು ಅಧಿಕಾರ ವಹಿಸಿಕೊಂಡರು. ಕೆ.ಎಸ್. ಜೈನ್ ಅವರು ರೂರ್ಕಿ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು 1987 ರಲ್ಲಿ ಪಡೆದಿದ್ದಾರೆ. ಇಂಡಿಯನ್ ರೈಲ್ವೆ ಸರ್ವಿಸ್ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್ (IRSME) 1988 ರ ಬ್ಯಾಚ್ ನ ಅಧಿಕಾರಿಯಾಗಿ ರೈಲ್ವೆಯಲ್ಲಿ ಸೇರಿದರು.

ಜನವರಿ 9, 1991 ರಂದು ಕೆ.ಎಸ್.ಜೈನ್ ಅವರು ಉತ್ತರ ರೈಲ್ವೆಯಲ್ಲಿ ಸಹಾಯಕ ವಿಭಾಗೀಯ ಮೆಕ್ಯಾನಿಕಲ್‌ ಎಂಜಿನಿಯರ್ / ಸಿ & ಡಬ್ಲ್ಯೂ / ಫಿರೋಜ್ಜುರದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು, ಉತ್ತರ ರೈಲ್ವೆ, DMW, NER, RDSO, & ICF ದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪರಿಣತಿಯನ್ನು ಪ್ರದರ್ಶಿಸಿಸಿ, ಮೆಕ್ಯಾನಿಕಲ್‌ ವಿಭಾಗಕ್ಕೆ ಗಮನಾರ್ಹ ಸೇವೆಯನ್ನು ಸಲ್ಲಿಸಿದ್ದಾರೆ.

ತಿರುವನಂತಪುರಂ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮತ್ತು ಅಲಿಪುರದ್ವಾರ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ದಕ್ಷಿಣ ಮಧ್ಯ ರೈಲ್ವೆಯಲ್ಲಿ CWE ಆಗಿ ಸೇರಿದಾಗ ಅವರ ಸಮರ್ಪಣೆ ಮತ್ತು ವಿಶಿಷ್ಟ ವಿಧಾನವು ಸ್ಪಷ್ಟವಾಯಿತು, ថ 1, 2023 80 PCME ನೇಮಕಗೊಂಡರು.

ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮುನ್ನ, ಕೆ.ಎಸ್.ಜೈನ್‌ ಅವರು ದಕ್ಷಿಣ ಮಧ್ಯ ರೈಲ್ವೆಯಲ್ಲಿ ಪ್ರಧಾನ ಮುಖ್ಯ ಮೆಕ್ಯಾನಿಕಲ್‌ ಎಂಜಿನಿಯ‌ರ್ ಸ್ಥಾನವನ್ನು ಹೊಂದಿದ್ದರು. ಅವರ ವೃತ್ತಿಜೀವನದುದ್ದಕ್ಕೂ ನಿರಂತರವಾಗಿ ಅನನ್ಯ ಸೇವೆಯನ್ನು ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು