ಹಬ್ಬಳ್ಳಿ: ನೇಹಾ ಕೊಲೆ ಕೇಸ್ ಬೆನ್ನಲ್ಲೆ ಅದೇ ಜಿಲ್ಲೆಯಲ್ಲಿ ಮತ್ತೋರ್ವ ಯುವತಿ ಕಾಣೆಯಾಗಿದ್ದು ಮುಸ್ಲಿಂ ಯುವಕ ಆಕೆಯನ್ನು ಅಪಹರಿಸಿರುವುದಾಗಿ ಆರೋಪ ಕೇಳಿ ಬಂದಿದೆ. ಮಗಳ ಅಪಹರಣವಾಗಿದೆ ಎಂದು ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳಸಾ ಗ್ರಾಮದ ನಿವಾಸಿ ಅಕ್ಷತಾ ಅತಿತಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಏಪ್ರಿಲ್ 18 ರಂದು ಯುವತಿಯನ್ನು ಯಾವುದೋ ದುರುದ್ದೇಶದಿಂದ ಅಪಹರಿಸಿದ್ದಾನೆಂದು ಅಕ್ಷತಾ ತಂದೆ ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಾಮದ ಸುಬಾನಿ ದೊಡ್ಡಮನಿ ಎಂಬಾತನ ವಿರುದ್ಧ ದೂರು ಕೊಟ್ಟಿದ್ದಾರೆ.ನಾಲ್ಕೈದು ವರ್ಷಗಳಿಂದ ಈ ಸುಬಾನಿ ಯುವತಿಯನ್ನು ಹಿಂಬಾಲಿಸುವುದು, ಪೀಡಿಸುವುದು, ದಾರಿಯಲ್ಲಿ ಬರುವಾಗ ಅಡ್ಡಗಟ್ಟುವುದು ಮಾಡುತ್ತಿದ್ದ. ಈ ಬಗ್ಗೆ ಅಕ್ಷತಾ ತನ್ನ ತಂದೆ ಬಳಿ ಹೇಳಿಕೊಂಡಿದ್ದಳು.
ಹೀಗಾಗಿ ಸುಬಾನಿ ಮತ್ತು ಕುಟುಂಬಸ್ಥರನ್ನು ಕರೆಸಿ ಬುದ್ಧಿವಾದ ಹೇಳಿ, ಮತ್ತೆ ಮಗಳಿಗೆ ತೊಂದರೆ ಕೊಡದಂತೆ ಎಚ್ಚರಿಕೆ ಕೊಟ್ಟಿದ್ದರು. ಆ ನಂತರವೂ ಈತನ ಕಾಟ ಮುಂದುವರಿದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಳಸ ಗ್ರಾಮದ ಅಖಂಡೇಶ್ವರ ಜಾತ್ರೆಗೆ ಹೋಗಿ ಬರುವುದಾಗಿ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಹೋದವಳು ನಾಪತ್ತೆಯಾಗಿದ್ದಾಳೆ. ಅಕ್ಷತಾಳನ್ನು ಸುಬಾನಿ ಮಾಬುಸಾಬ್ ದೊಡ್ಡಮನಿ ಅಪಹರಿಸಿದ್ದಾನೆಂದು ಉಲ್ಲೇಖಿಸಿದ್ದಾರೆ