News Karnataka Kannada
Saturday, May 04 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ : ಗೂಡ್ಸ್ ವಾಹನ ಚಾಲನೆ ಮಾಡಿ ಸಂಸಾರ ತಕ್ಕಡಿ ತೂಗಿಸಿದ ನೀಲಮ್ಮ

Hubballi: Neelamma rides goods vehicle, weighs family's balance
Photo Credit : News Kannada

ಹುಬ್ಬಳ್ಳಿ : ವಾಹನ ಚಾಲನೆ ಮಾಡುತ್ತಾ ಜೀವನ ನಡೆಸುತ್ತಿರುವ ಮಹಿಳೆಯೋರ್ವಳಿಗೆ ದೇಶಪಾಂಡೆ ಫೌಂಡೇಶನ್ ಬಿ.ಸಿ.ಐ ಮೂಲಕ ಸನ್ಮಾನ ಮಾಡಲಾಗಿದೆ.

ಮೂಲತಃ ಮಂಟೂರು ಗ್ರಾಮದ ನೀಲಮ್ಮ ಶಿವಶಿಂಗೇರಿಯವರು ಕುಟುಂಬದ ಅರ್ಥಿಕ ಪರಿಸ್ಥಿತಿ ನಿಭಾಯಿಸಲು ಚಾಲಕ ವೃತ್ತಿ ಆಯ್ಕೆ ಮಾಡಿಕೊಂಡು ಕಳೆದ ಎರಡು ವರ್ಷಗಳಿಂದ ಗೂಡ್ಸ್ ವಾಹನ ಓಡಿಸುತ್ತಾ ಬದುಕುನಡೆಸುತ್ತಿದ್ದಾರೆ.

ಮಾರ್ಚ್ ತಿಂಗಳು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಇತ್ತಿಚೆಗೆ ಶಿರಗುಪ್ಪಿ ಗ್ರಾಮದಲ್ಲಿ ನೀಲಮ್ಮ ಶಿವಶಿಂಪಿಗೇರಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ವೇಳೆ ನೀಲಮ್ಮ ಮಾತನಾಡಿ ತಮ್ಮ ಪತಿ ವಾಹನ ಚಾಲನೆ ಮಾಡಲು ನೀಡಿದ ಪ್ರೋತ್ಸಾಹ ನೆನೆದರು. ಈ ಸಂದರ್ಭದಲ್ಲಿ ದೇಶಪಾಂಡೆ ಫೌಂಡೇಶನ್ ಬಿ.ಸಿ.ಐ ಕ್ಲಸ್ಟರ್ ಮ್ಯಾನೇಜರ್ ಗುರುನಾಥ್ ಬಿರಾದಾರ ಮಾತನಾಡಿ ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಲ್ಲ, ಅವಳು ದೇಶವನ್ನೇ ಪ್ರತಿನಿಧಿಸಬಲ್ಲಳು ಎಂದರು.

ಈ ಸಂದರ್ಭದಲ್ಲಿ ಮಂಟೂರು, ಶಿರಗುಪ್ಪಿ ಸುತ್ತ ಮುತ್ತಲಿನ ಹಳ್ಳಿಯ ಮಹಿಳೆಯರು ದೇಶಪಾಂಡೆ ಫೌಂಡೇಶನ್ ಬಿ.ಸಿ.ಐ ಸಿಬ್ಬಂದಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು