ಹುಬ್ಬಳ್ಳಿ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ದೇಶ ನಾಶ: ವಿಪಕ್ಷ ನಾಯಕ ಸಿದ್ದರಾಮಯ್ಯ

ಹುಬ್ಬಳ್ಳಿ: ಬಿಜೆಪಿ ಪಕ್ಷದವರು ದೇಶದಲ್ಲಿ ಯದ್ಧದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಈ ಚುನಾವಣೆ ಕೋಮವಾದಿಗಳನ್ನು ಸೋಲಿಸಬೇಕು ಅವರು ಮತ್ತೆ ಅಧಿಕಾರಕ್ಕೆ ಬಂದರೆ ಕೋಮುವಾದ‌ ಆರಂಭವಾಗಿ ದೇಶ ನಾಶವಾಗುತ್ತದೆ ಎಂದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ರಕ್ಷಣೆ ಮಾಡಬೇಕಾದವರೂ ಪ್ರಚೋದನೆ ಹೇಳಿಕೆ‌ ನೀಡುತ್ತಿದ್ದಾರೆ.

ಅಮಿತ್‌ ಶಾ, ಟಿಪ್ಪು ಹಾಗೂ ಅಬ್ಬಕ್ಕ, ಟಿಪ್ಪು ಸಾವರ್ಕರ್ ಎನ್ನುತ್ತಿದ್ದಾರೆ. ಜನರ ಸಮಸ್ಯೆ ಬಗ್ಗೆ ಪ್ರಸ್ತಾಪ ಆಗುವ ಬದಲು ಹೊಡಿಬಡಿ ಅಂತಾ ಹೇಳ್ತಿದ್ದಾರೆ. ಯಾವ ಧರ್ಮವೂ ಇದನ್ನ ಒಪ್ಪಲ್ಲ. ಬಿಜೆಪಿ ಸಮಾಜದ ಒಡೆದು ಅಶಾಂತಿ ನಿರ್ಮಾಣ ಮಾಡ್ತಿದ್ದಾರೆ.

ಸಮಾಜಕ್ಕೆ ಸುಧಾರಣೆ ಮಾಡಿದವರನ್ನು ಎಲ್ಲರನ್ನು ಗೌರವಿಸಬೇಕು. ದೇಶದ ಪ್ರೇಮ ಬಗ್ಗೆ ಮಾತನಾಡಿ ದ್ವೇಷ ಕಕ್ಕುತ್ತಿದ್ದಾರೆ ಎಂದರು.

ಕುಮಾರಸ್ವಾಮಿ ಜಾತ್ಯಾತೀತ ಸಿದ್ಧಾಂತದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
ಕೋಮುವಾದಿಗಳೊಂದಿಗೆ ಕುಮಾರಸ್ವಾಮಿ ಸರ್ಕಾರ ರಚಿಸಿದ್ದರು.  ರಾಜ್ಯ ಉದ್ಧಾರ ಮಾಡೋದಕ್ಕೆ ಅವರು ಕೈ ಜೊಡಿಸಿದ್ದಾರಾ ಎಂದು ಕುಮಾರಸ್ವಾಮಿ ಜಾತ್ಯಾತೀತ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

 

Ashika S

Recent Posts

ಪುಷ್ಪ ಸಿನಿಮಾ ಮಾಡಿ ನನ್ನ ಜೀವನ ಬದಲಾಗಿಲ್ಲ ಎಂದ ಬಹುಭಾಷಾ ನಟ ಫಾಹದ್ ಫಾಸಿಲ್

ಬಹುಭಾಷಾ ನಟ ಫಾಹದ್ ಫಾಸಿಲ್ ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ಪುಷ್ಪ ಮಾಡಿದ್ದಕ್ಕೆ ನನಗೇನು ಸಿಕ್ತು ಅನ್ನೋದು ತಪ್ಪು…

6 mins ago

ಪಿತ್ರೋಡಾ ಅವರ ‘ಜನಾಂಗೀಯ’ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ

 ಸ್ಯಾಮ್ ಪಿತ್ರೋಡಾ ಅವರ ‘ಜನಾಂಗೀಯ’ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರನ್ನು ಅವರ ಬಣ್ಣದ ಆಧಾರದ ಮೇಲೆ…

7 mins ago

ʼಕೋವಿಶೀಲ್ಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತಿಲ್ಲʼ ಎಚ್ಚರಿಕೆ ನೀಡಿದ ಆಮಂತ್ರಣ ಪತ್ರಿಕೆ

ಕೊರೊನಾ ಲಸಿಕೆ ಕೋವಿಶೀಲ್ಡ್​ ಅಭಿವೃದ್ಧಿ ಪಡಿಸಿದ್ದ ದೈತ್ಯ ಫಾರ್ಮಾ ಕಂಪನಿ ಅಸ್ಟ್ರಝೆನೆಕಾ, ಕೋರ್ಟ್​ ಮುಂದೆ ಸತ್ಯವೊಂದನ್ನು ಒಪ್ಪಿಕೊಂಡಿದೆ. ಅದು ಏನೆಂದರೆ…

31 mins ago

ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹರಡಿದರೆ ಕಠಿಣ ಕ್ರಮ: ಪೊಲೀಸ್ ಇಲಾಖೆ

ಸಾಮಾಜಿಕ ಜಾಲತಾಣಗಳಲ್ಲಿ ಬೇರೆ-ಬೇರೆ ಸಮುದಾಯ, ಜಾತಿ, ಧರ್ಮ, ವ್ಯಕ್ತಿಗಳ ವಿರುದ್ಧ ಉದ್ದೇಶ  ಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡುವುದು ಹಾಗೂ ತಮಾಷೆಗಾಗಿ…

40 mins ago

ಮಗುವಿಗೆ ಜನ್ಮ ನೀಡಿದ 13 ವರ್ಷದ ಬಾಲಕಿ: ಇಬ್ಬರು ಪೊಲೀಸರ ವಶಕ್ಕೆ

13 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

49 mins ago

ನಾಳೆ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ ದಿನಾಂಕ ನಿಗದಿಯಾಗಿದ್ದು, ನಾಳೆ ಬೆಳಗ್ಗೆ 10.30ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

1 hour ago