ಮಡಿಕೇರಿ

ಮಡಿಕೇರಿ: ಆಕಾಶವಾಣಿಯಲ್ಲಿ ರೇಡಿಯೋ ಕಿಸಾನ್ ದಿನ ಆಚರಣೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರೇಡಿಯೋ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ಕೃಷಿ ನಿರ್ದೇಶಕರಾದ ಶಬನಾ ಎಂ. ಶೇಕ್ ಅವರು ನುಡಿದಿದ್ದಾರೆ.

ಮಡಿಕೇರಿ ಆಕಾಶವಾಣಿ ಕೇಂದ್ರವು ಹಮ್ಮಿಕೊಂಡಿದ್ದ ರೇಡಿಯೋ ಕಿಸಾನ್ ದಿನದ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. ಕೃಷಿ ಪ್ರಧಾನವಾದ ಈ ಜಿಲ್ಲೆಯಲ್ಲಿ ಕೃಷಿಕರಿಗೆ ಉಪಯುಕ್ತವಾದ ವಿಚಾರಗಳು ಪ್ರಸಾರವಾಗುತ್ತಿದ್ದು, ಕೃಷಿ ಇಲಾಖೆಯ ಯೋಜನೆಗಳ ಮಾಹಿತಿ ತಿಳಿಸಲು ಅನುಕೂಲವಾಗಿದೆ. ಇತರೇ ಜಿಲ್ಲೆಗಳಿಗಿಂತ ಕೊಡಗಿನ ಪರಿಸರ ಭಿನ್ನವಾಗಿದೆ. ಇಲ್ಲಿಯೂ ಸಾಧಕ ರೈತರು ಇದ್ದಾರೆ. ಕೃಷಿ ಇಲಾಖೆಯು ಹಾಲಿ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡುತ್ತಿದ್ದು ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಗೆ ರೈತರು ಹೆಸರು ನೋಂದಾಯಿಸಿಕೊಂಡು ಪ್ರಯೋಜನ ಪಡೆಯುವಂತಾಗಬೇಕು ಎಂದು ಕರೆ ನೀಡಿದರು.

ಕೊಡಗು ಜಿ.ಪಂ.ಉಪ ಕಾರ್ಯದರ್ಶಿ ಜಿ.ಧನರಾಜ್ ಅವರು ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ನೂರಾರು ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ಇದೆ. ರೈತರ ಹತ್ತಾರು ಕೆಲಸಗಳಿಗೆ ಈ ಮೂಲಕ ಸಹಾಯವಾಗಲಿದೆ ಎಂದರು.

ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಡಾ.ವಿಜಯ್ ಅಂಗಡಿ ಅವರು ಪ್ರಾಸ್ತವಿಕವಾಗಿ ಮಾತನಾಡಿ 1965 ರಿಂದ ಕೃಷಿ ಕಾರ್ಯಕ್ರಮಗಳು ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿವೆ. ರೈತರಿಗೆ ಪ್ರತೀ ದಿನವೂ ಕೃಷಿ ಕುರಿತ ಮಾಹಿತಿಯನ್ನು ನೀಡಲಾಗುತ್ತಿದೆ. 2004ರ ಫೆಬ್ರವರಿ 15 ರಂದು ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಪ್ರಾಯೋಜಕತ್ವದಲ್ಲಿ ಕೃಷಿ ಕಾರ್ಯಕ್ರಮಗಳ ಪ್ರಸಾರವು ನೆಡೆಯುತ್ತಿದೆ. ಈ ಹಿನ್ನಲೆಯಲ್ಲಿ ಫೆಬ್ರವರಿ 15 ರಂದು ರೇಡಿಯೋ ‘ರೈತ ದಿನ’ ಆಚರಿಸಲಾಗುತ್ತಿದೆ. ದೇಶದಲ್ಲಿ 96 ಆಕಾಶವಾಣಿ ಕೇಂದ್ರಗಳಿಂದ ಕಿಸಾನ್ ವಾಣಿ ಪ್ರಾಯೋಜಿತ ಕಾರ್ಯಕ್ರಮಗಳು ಮೂಡಿಬರುತ್ತಿವೆ. ರೈತರಿಗೆ ಹತ್ತಾರು ಸಂಗತಿಗಳು ಸಿಗುವಂತಾಗಲು ಪ್ರಸಾರದ ಸಂಯೋಜನೆ ಮಾಡಲಾಗಿದೆ. ರೈತರಿಗೆ ರೇಡಿಯೋ ಈಗಲೂ ನೆಚ್ಚಿನ ಮಧ್ಯಮವಾಗಿದೆ ಎಂದು ತಿಳಿಸಿದರು.

ರೇಡಿಯೋ ಕಿಸಾನ್ ದಿವಸದ ನಿಮಿತ್ತ ಎಂ ಬಾಡಗ ಗ್ರಾಮದ ಬಾರಿಯಂಡ ಸಂಜನ್ ಪೆÇನ್ನಪ್ಪ, ಮೈತಾಡಿಯ ಎಚ್.ಕೆ ಹನೀಫ್, ಚೇರಂಗಾಲದ ಮೂಲೆಮಜಲು ಗಣೇಶ್ ಹಾಗೂ ಗರಂಗದೂರಿನ ಕೆ ಎಸ್ ಮಂಜುನಾಥ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ರೈತ ಹನೀಫ್ ಅವರು ಮಾತಾಡಿ ರೇಡಿಯೋದಲ್ಲಿ ಬರುವ ಕೃಷಿ ಕಾರ್ಯಕ್ರಮಗಳು ನಮ್ಮ ಜೀವನವನ್ನು ಬದಲಿಸುತ್ತವೆ, ಸ್ಫೂರ್ತಿ ನೀಡುತ್ತವೆ ಎಂದರು.

ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಮಾತನಾಡಿ ಆಕಾಶವಾಣಿಯಿಂದ ಕೃಷಿಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳು ಭಿತ್ತರವಾಗುತ್ತಿದ್ದು, ಮಾಹಿತಿ ಪಡೆದು ಉತ್ತಮ ಬೆಳೆ ಬೆಳೆಯುವಂತಾಗಬೇಕು ಎಂದರು.

ಸಂಜೆ 6.50 ರಿಂದ ನೇರ ಪ್ರಸಾರದಲ್ಲಿ ಅಭಿನಂದಿಸಿದ ರೈತರ ಅಭಿಪ್ರಾಯಗಳನ್ನು ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆಕಾಶವಾಣಿಯ ಕೂಪದಿರ ಶಾರದಾ ನಂಜಪ್ಪ, ಸುಬ್ರಾಯ ಸಂಪಾಜೆ, ಆನಂದನ್, ಶಿವಾನಂದನ್, ಪಂಕಜ್ ಕುಡ್ತರ್‍ಕರ್ ಹಾಗೂ ಸಿಬ್ಬಂದಿ ಇದ್ದರು.

ರೈತ ಕುಟುಂಬದ ಸದಸ್ಯರೂ ಆಗಮಿಸಿದ್ದು ವಿಶೇಷವಾಗಿತ್ತು. ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಹಿನ್ನೆಲೆಯಲ್ಲಿ ರಾಗಿ ಅಂಬಲಿಯ ಜೊತೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ರೈತರಿಗೆ ಚಕ್ರಮುನಿ, ಲೆಮನ್ ಗ್ರಾಸ್, ಪೆಪ್ಪರ್ ಮಿಂಟ್, ಪಟಾವಳಿ ಕಬ್ಬಿನ ಗಿಡಗಳನ್ನೂ ಕಾಣಿಕೆಯಾಗಿ ಕೊಡಲಾಯಿತು. ಲೆಮನ್ ಗ್ರಾಸ್ ನ ಪಾನೀಯವನ್ನು ಪರಿಚಯಿಸಲಾಯಿತು.

Sneha Gowda

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

6 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

7 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

8 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

8 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

8 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

8 hours ago