ಹುಬ್ಬಳ್ಳಿ: ಬೆಳಗ್ಗೆಯಿಂದ ಅದ್ಭುತವಾಗಿ ರಾಜ್ಯದಲ್ಲಿ ಮತದಾನವಾಗುತ್ತಿದೆ.ಪ್ರಧಾನ ಮಂತ್ರಿಗಳು ಕರೆ ಕೊಟ್ಟಂತೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಭಾಗವಹಿಸುತ್ತಿದ್ದಾರೆ.ಮತ್ತೆ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಮತದಾನದ ಬಳಿಕ ಮಾತನಾಡಿದ ಅವರು, ವಿದ್ಯಾವಂತರ ಸಹ ಬೇಗ ಬಂದು ಮತದಾನ ಮಾಡುತ್ತಿದ್ದಾರೆ..ಎಲ್ಲಾ ಬೂತ್ ಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದಾರೆ.ಇದನ್ನು ನೋಡಿದ್ರೆ ನಮ್ಮ ಪಕ್ಷಕ್ಕೆ ಬಹುದೊಡ್ಡ ಬೆಂಬಲ ಸಿಗಲಿದೆಂಬ ಭರವಸೆ ಸಿಕ್ಕಿದೆ.113 + 15 ಸೀಟ್ ಗಳನ್ನು ನಮ್ಮ ಪಕ್ಷ ಗೆಲಲ್ಲಿದೆ ಎಂದರು.