News Karnataka Kannada
Tuesday, May 07 2024
ಹುಬ್ಬಳ್ಳಿ-ಧಾರವಾಡ

ಫೇಕ್ ಇನ್ಸ್ಟಾಗ್ರಾಮ್ ಅಕೌಂಟ್ ಪೋಟೊ ವೈರಲ್: ವಿದ್ಯಾರ್ಥಿನಿಯರಿಂದ ಹೋರಾಟ

Fake Instagram account photo goes viral, students protest
Photo Credit : News Kannada

ಹುಬ್ಬಳ್ಳಿ: ಫೇಕ್ ಇನ್ಸ್ಟಾಗ್ರಾಮ್ ಅಕೌಂಟ್ ತೆರೆದು ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿ, ಅವರ ಫೋಟೋಗಳನ್ನು ಅಶ್ಲೀಲವಾಗಿ ವೈರಲ್ ಮಾಡಲಾಗಿದ್ದು, ಫೋಟೋಗಳನ್ನು ವೈರಲ್ ಮಾಡಿದ ವಂಚಕನನ್ನು ಸೆರೆ ಹಿಡಿಬೇಕು ಎಂದು ವಿದ್ಯಾರ್ಥಿನಿಯರು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ.

ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ಸೈಬರ್ ವಂಚಕನೊಬ್ಬ, ಕಾಲೇಜು ವಿದ್ಯಾರ್ಥಿಗಳ ಫೋಟೋಗಳನ್ನು ಅಶ್ಲೀಲವಾಗಿ ಬಿಂಬಿಸಿ, ವೈರಲ್ ಮಾಡಿದ್ದ. ಆದರೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವಂಚಕನಿಗೆ ಕಠಿಣವಾದ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಇಂದು ನೂರಾರು ವಿದ್ಯಾರ್ಥಿನಿಯರು ಎಬಿವಿಪಿ ವತಿಯಿಂದ, ಹುಬ್ಬಳ್ಳಿಯ ಡಾ. ಬಿ.ಆರ್.ಅಂಬೇಡ್ಕರ್ ಸರ್ಕಲ್‌ನಿಂದ ಪ್ರತಿಭಟನಾ ರಾಲಿ ಮಾಡಿ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅಷ್ಟೇ ಅಲ್ಲದೆ ಈ ಸೈಬರ್ ವಂಚಕನ ಹಿಂದೆ ದೊಡ್ಡದಾದ ಜಾಲ ಇದೆ. ಇದನ್ನು ಪೊಲೀಸರು ಕಂಡು ಹಿಡಿಯಬೇಕು. ಸೈಬರ್ ವಂಚಕನಿಂದ ವಿದ್ಯಾರ್ಥಿನಿಯನ್ನು ಕಾಪಾಡಬೇಕೆಂದು ಒತ್ತಾಯಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು