ಧಾರವಾಡ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮನೆಯೊಂದಕ್ಕೆ ಬೆಂಕಿ ತಗುಲಿದೆ. ಪರಿಣಾಮ ಮನೆಯಲ್ಲಿನ 45 ಸಾವಿರ ನಗದು ಹಣ ಸೇರಿ ಪಿಠೋಪಕರಣ, ದಿನ ಬಳಕೆಯ ಸಾಮಗ್ರಿ, ದವಸ ಧಾನ್ಯ ಬೆಂಕಿಗೆ ಆಹುತಿಯಾದ ಘಟನೆ ಶಿರೂರು ಗ್ರಾಮದಲ್ಲಿ ನಡೆದಿದೆ.
ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ಪ್ರಕಾಶ್ ಸೋಮಪ್ಪ ತಳವಾರ ಎಂಬುವವರ ಮನೆಗೆ ಸೋಮವಾರ ರಾತ್ರಿ ಸುಮಾರು 11-30 ಗಂಟೆಗೆ ಶಾರ್ಟ್ ಸರ್ಕ್ಯೂಟ್ ಬೆಂಕಿ ತಗುಲಿದ್ದು, ಮನೆಯಲ್ಲಿನ ಪಿಠೋಪಕರಣ ಧಗಧಗಿಸ ತೊಡಗಿವೆ.
ತಕ್ಷಣ ಕುಟುಂಬಸ್ಥರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ.