News Karnataka Kannada
Saturday, May 04 2024
ಹುಬ್ಬಳ್ಳಿ-ಧಾರವಾಡ

ಬಿಜೆಪಿ ಗೆದ್ದರೆ ಇವಿಎಂ ಸಮಸ್ಯೆ ಇದೆ ಅಂತ ಕಾಂಗ್ರೆಸ್​ನವರು ಹೇಳುತ್ತಾರೆ: ಪ್ರಹ್ಲಾದ್ ಜೋಶಿ

 ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಾಗ EVM ಸಮಸ್ಯೆ ಇರಲಿಲ್ಲ. ಆದರೆ ನಾವು ಗೆದ್ದರೆ ಮಾತ್ರ ಇವಿಎಂ ಸಮಸ್ಯೆ ಇದೆ ಅಂತ ಕಾಂಗ್ರೆಸ್​ನವರು ಹೇಳುತ್ತಾರೆ.  ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದರು. 
Photo Credit : NewsKarnataka

ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಾಗ ಇವಿಎಂ ಸಮಸ್ಯೆ ಇರಲಿಲ್ಲ. ಆದರೆ ನಾವು ಗೆದ್ದರೆ ಮಾತ್ರ ಇವಿಎಂ ಸಮಸ್ಯೆ ಇದೆ ಅಂತ ಕಾಂಗ್ರೆಸ್​ನವರು ಹೇಳುತ್ತಾರೆ.  ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಲೋಕಸಭೆ ಚುನಾವಣೆ ಸೋಲಿ‌ನ‌ ಕನಸು ಬೀಳುತ್ತಿದೆ, ಕಾಂಗ್ರೆಸ್ಸಿನವರು ಸೋಲಿನ ಭಯದಿಂದ ಹತಾಶರಾಗಿದ್ದಾರೆ.

ಮಮತಾ ಬ್ಯಾನರ್ಜಿ ಕೇವಲ 40 ಕ್ಷೇತ್ರ ಗೆಲ್ಲುತ್ತೇವೆ ಅಂತ ಹೇಳುತ್ತಾರೆ. ಕಾಂಗ್ರೆಸ್​ ನಾಯಕರಿಗೂ ಸೋಲುತ್ತೇವೆ ಅಂತ ಅರ್ಥ ಆಗಿದೆ. ಹೀಗಾಗಿ ಚುನಾವಣಾ ಆಯೋಗ, EVM ಮೇಲೆ ಅನುಮಾನಪಡುತ್ತಾರೆ ಎಂದರು.

ಕಾಂಗ್ರೆಸ್ ಪಕ್ಷ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಮೋದಿ ಅವರ ನೇತೃತ್ವದಲ್ಲಿ ಬಹಳ ಬದಲಾವಣೆಯಾಗಿದೆ. ಬಿಜೆಪಿಯನ್ನು ಗೆಲ್ಲಿಸಬೇಕೆಂದು ಜನ‌ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

ಇನ್ನು ಬಿಜೆಪಿಯು ಬಾಂಗ್ಲಾದೇಶ ಜೊತೆಗೆ ಸೌಹಾರ್ದ ಗಡಿ ಒಪ್ಪಂದ ಮಾಡಿಕೊಂಡಂತೆ ನಾವು ಶ್ರೀಲಂಕೆಗೆ ಸ್ನೇಹದ ಸಂಕೇತವಾಗಿ ಕಚತೀವು ದ್ವೀಪ ಕೊಟ್ಟಿದ್ದೇವೆ ಎಂಬ ಮಲ್ಲಿಕಾರ್ಜುನ್​ ಖರ್ಗೆ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಂದು ಸಾರ್ವಭೌಮ ಸರ್ಕಾರ ಒಮ್ಮೆ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಅದನ್ನು ವಾಪಸ್ ಪಡೆಯಲು ಸಾಧ್ಯವೇ? ಅನೇಕ ದೇಶಗಳ ಜೊತೆ ಒಡಂಬಡಿಕೆ ಮಾಡಿಕೊಂಡಿರುತ್ತೇವೆ. ಸರ್ಕಾರ ಬದಲಾದ ಕೂಡಲೇ ಆ ಒಡಂಬಡಿಕೆ ರದ್ದು ಮಾಡಿಕೊಳ್ಳಲು ಆಗಲ್ಲ. ನೀವು ದ್ವೀಪವನ್ನು ಕೊಟ್ಟಿದ್ದು ಯಾಕೆ ಅಂತ ಹೇಳಿ. ನಮ್ಮ ಮೂರ್ಖತನದಿಂದ ಕೊಟ್ಟಿದ್ದೇವೆ ಅಂತ ಒಪ್ಪಿಕೊಳ್ಳಲಿ. ನಮ್ಮ ದೇಶದ ನೆಲ ಜಲದ ಬಗ್ಗೆ ನಮಗೆ ಕಾಳಜಿ ಇರಲಿಲ್ಲ ಅಂತ ಒಪ್ಪಿಕೊಳ್ಳಲಿ. ಅದನ್ನು ಬಿಟ್ಟು ಈ ರೀತಿ ಬಾಲಿಶ ಹೇಳಿಕೆ ನೀಡೋದನ್ನ ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ, ಆರ್​​ಎಸ್​ಎಸ್​ ವಿಷವಿದ್ದಂತೆ, ಅದರ ರುಚಿ ನೋಡಬೇಡಿ ಎಂಬ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಜೋಶಿ, ಮಲ್ಲಿಕಾರ್ಜುನ ಖರ್ಗೆ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು