News Karnataka Kannada
Thursday, May 09 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Boy dies after coming in contact with electric wire
Photo Credit : News Kannada

ಧಾರವಾಡ: ಧಾರವಾಡದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಕ್ರಿಕೆಟ್ ಆಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ 16 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಧಾರವಾಡ‌ ನಗರದ ಮದಿಹಾಳ ಸಿದ್ದರಾಮ ಕಾಲೊನಿಯಲ್ಲಿ ನಡೆದಿದೆ.

ಶ್ರೇಯಸ್ ಸಿನ್ನೂರ (16) ಮೃತ ಬಾಲಕ. ತನ್ನ ಮನೆಯ ಹಿಂದೆ ಕ್ರಿಕೆಟ್ (Cricket) ಆಡಲು ಹೋಗಿದ್ದು, ಆಟದ ವೇಳೆ ಬಾಲ್ ಹಿಡಿಯಲು ಹೋದಾಗ ಶ್ರೇಯಸ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ.

ಶ್ರೇಯಸ್ ತನ್ನ ಪೋಷಕರಿಗೆ ಒಬ್ಬನೇ ಮಗನಾಗಿದ್ದ. ಧಾರವಾಡ ರಾಜೀವ್‌ ಗಾಂಧಿ ಶಾಲೆಯಲ್ಲಿ SSLC ಓದುತಿದ್ದ. ಸಂಜೆ ಶಾಲೆಯಿಂದ ಬಂದ ಮಗ ಮನೆಯಲ್ಲಿ ಕುಳಿತಾಗ ಗೆಳೆಯ ಆಟಕ್ಕೆ ಕರೆದಿದ್ದಾನೆ. ತಮ್ಮ ಮನೆಯ ಹಿಂದೆ ಕಾಮಗಾರಿ ಪ್ರಗತಿಯಲ್ಲಿದ್ದ ಕಟ್ಟದ ಬಳಿ ಕ್ರಿಕೆಟ್‌ ಆಡಲು ಹೋದ ಶ್ರೇಯಸ್‌ಗೆ 10 ನಿಮಿಷದಲ್ಲಿ ಕರೆಂಟ್‌ ಶಾಕ್‌ಗೆ ತಗುಲಿದೆ. ವಿಷಯ ತಿಳಿಯುತ್ತಿದ್ದಂತೆ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೂಡಲೇ ಮಗನನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಪ್ರಯೋಜನವಾಗಲಿಲ್ಲ ಎಂದು ಮೃತ ಬಾಲಕನ ತಂದೆ ಅಶೋಕ್‌ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು