News Karnataka Kannada
Thursday, May 02 2024
ಹುಬ್ಬಳ್ಳಿ-ಧಾರವಾಡ

ಅಣ್ಣಿಗೇರಿಯಲ್ಲಿ ಬಕ್ರೀದ್ ನಿಮಿತ್ತ ಶಾಂತಿ ಸಭೆ

A peace meeting on the occasion of Bakrid at the People-Friendly Police Station in Annigeri
Photo Credit : News Kannada

ಅಣ್ಣಿಗೇರಿ: ಇದೇ ಜೂ.೨೯ ರಂದು ಆಚರಿಸಲ್ಪಡುವ ಮುಸ್ಲಿಂ ಸಮಾಜದ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಮಾಜ ಬಾಂಧವರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಿ ಯಶಸ್ವಿಗೊಳಿಸಿ ಎಂದು ಪಿಎಸ್‌ಐ ಸಿದ್ಧಾರೂಢ ಆಲದಕಟ್ಟಿ ಹೇಳಿದರು.

ಅವರು ಸ್ಥಳೀಯ ಜನಸ್ನೇಹಿ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡ ಬಕ್ರೀದ ಹಬ್ಬದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪಟ್ಟಣದಲ್ಲಿ ಇಲ್ಲಿಯತನಕ ಎಲ್ಲ ಸಮುದಾಯದವರು ಸೇರಿಕೊಂಡು ಜಾತಿ ಬೇಧ ಭಾವ ಮಾಡದೇ ಹಬ್ಬವನ್ನು ಆಚರಿಕೊಂಡು ಬಂದಿರುತ್ತಿರೋ ಅದೇ ತೆರನಾಗಿ ಮುಂಬರುವ ದಿನಗಳಲ್ಲಿಯೂ ಕೂಡಾ ಹಬ್ಬವನ್ನು ಆಚರಿಸಿ, ಇದಕ್ಕೆ ಬೇಕಾಗುವ ಪೊಲೀಸ್ ಭದ್ರತೆಯನ್ನು ನೀಡಲು ಇಲಾಖೆ ನಿಮ್ಮೊಂದಿಗೆ ಇದೆ ಎಂದರು.

ಗಣ್ಯರಾದ ಷಣ್ಮುಖ ಗುರಿಕಾರ ಮಾತನಾಡಿ, ಪಟ್ಟಣದಲ್ಲಿ ಜರುಗುವ ಯಾವುದೇ ಹಬ್ಬವನ್ನು ಹಿಂದೂ ಮುಸ್ಲಿಂ ಸಮಾಜದವರು ಸೌಹಾರ್ಧತೆಯಿಂದ ಆಚರಿಕೊಂಡು ಬಂದಿದ್ದಾರೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದ ಮುಖಂಡರ ನೇತೃತ್ವದಲ್ಲಿ ಹಬ್ಬವನ್ನು ಆಚರಿಸುತ್ತೇವೆ ಎಂದು ಭರವಸೆ ನೀಡಿದರು.

ಅಂಜುಮನ್ ಸಂಸ್ಥೆ ಸದಸ್ಯ ಆಶೀಫಲಿ ಗುಳೇದಗುಡ್ಡ ಮಾತನಾಡಿ, ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ ಹಬ್ಬಕ್ಕೆ ಬೇಕಾಗುವ ಸಕಲ ಸಿದ್ಧತೆಯನ್ನು ಅಂಜುಮನ್ ಸಂಸ್ಥೆಯಿದ ಮಾಡಿಕೊಳ್ಳಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ವೇಳೆ ಪುರಸಭೆ ಸದಸ್ಯ ನಾಗಪ್ಪ ದಳವಾಯಿ, ರಮಜಾನಸಾಬ ಅಬ್ಬಿಗೇರಿ, ಫಕ್ರುವಲಿ ಲೋಕಾಪೂರಿ, ಮಹ್ಮದರಫೀಕ ಬಡಿಗೇರ, ಹಜರೇಸಾಬ ಸುಂಕದ ಧರ್ಮಣ್ಣ ಹರನಶಿಕಾರಿ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು