ಹುಬ್ಬಳ್ಳಿ: ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸ್ಟೇಟಿಂಗ್ ಸ್ಪರ್ಧೆಯನ್ನು ಇತ್ತೀಚೆಗೆ ಬೆಂಗೂರಿನಲ್ಲಿ ಆಯೋಗಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿ ರೋಲರ್ ಸ್ಕೆಟಿಂಗ್ ಅಕಾಡೆಮಿ ಬಾಲಕಿ ಸೌಜನ್ಯ ಶೇಷಗಿರಿ ಕ್ವಾಡ್ ವಿಭಾಗದಲ್ಲಿ ರಿಂಕ್ 500+ಡಿ -(ಚಿನ್ನದ)ಪದಕ, ರೋಡ್ -3000-(ಚಿನ್ನದ) ಪದಕ, ಯಾಸ್ಮಿನ್ ತಹಶೀಲ್ದಾರ್ ಇನ್ಲೈನ್ ವಿಭಾಗದಲ್ಲಿ road 1ಲಾಪ್ -(ಬೆಳ್ಳಿಯ)ಪದಕ, ರಿಂಕ 500+ಡಿ – (ಕಂಚಿನ) ಪದಕ ಪಡೆದು ಈ ಮಕ್ಕಳು ರಾಂಚಿಲಿ ನಡೆಯಲಿರುವ 67ನೇ ನೇಷನಲ್ ಸ್ಕೂಲ್ ಗೇಮ್ಸ್ಗೆ ಆಯ್ಕೆ ಆಗಿದ್ದಾರೆ.
ಈ ಮಕ್ಕಳಿಗೆ ಅಕ್ಷಯ್ ಸೂರ್ಯವಂಶಯವರು ತರಬೇತಿ ನೀಡಿದ್ದಾರೆ. ಈ ಸಾಧನೆಯನ್ನು ಹುಬ್ಬಳ್ಳಿ ರೋಲರ್ ಸ್ಕೆಟಿಂಗ್ ಅಕಾಡೆಮಿ ಸದಸ್ಯರು, ಪೋಷಕರು, ಧಾರವಾಡ ಜಿಲ್ಲಾ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರಶಂಸಿಸಿ ಅಭಿನಂದಿಸಿದ್ದಾರೆ.