News Karnataka Kannada
Tuesday, April 30 2024
ಹುಬ್ಬಳ್ಳಿ-ಧಾರವಾಡ

18 ಕೋಟಿ ಹಣ ಪತ್ತೆ : ಐಟಿ ಅಧಿಕಾರಿಗಳು ಎಸ್‌ಬಿಐಗೆ ರವಾನೆ

ದಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ನಾ ಅಪಾರ್ಟ್‌ಮೆಂಟ್‌ನಲ್ಲಿರುವ ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಬಸವರಾಜ ದತ್ತುರವರ ಅವರ ಮನೆಯಲ್ಲಿ ಜಪ್ತಿ ಮಾಡಲಾದ 18 ಕೋಟಿ ರೂ. ಹಣವನ್ನು ಐಟಿ ಅಧಿಕಾರಿಗಳು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ರವಾನಿಸಿರುವ ಘಟನೆ ನಡೆದಿದೆ.
Photo Credit : NewsKarnataka

ಧಾರವಾಡ: ದಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ನಾ ಅಪಾರ್ಟ್‌ಮೆಂಟ್‌ನಲ್ಲಿರುವ ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಬಸವರಾಜ ದತ್ತುರವರ ಅವರ ಮನೆಯಲ್ಲಿ ಜಪ್ತಿ ಮಾಡಲಾದ 18 ಕೋಟಿ ರೂ. ಹಣವನ್ನು ಐಟಿ ಅಧಿಕಾರಿಗಳು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ರವಾನಿಸಿರುವ ಘಟನೆ ನಡೆದಿದೆ.

ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ಬಸವರಾಜ ದತ್ತುನವರ ಅವರ ಮನೆಯಲ್ಲಿ ಮದ್ಯ ಶೇಖರಿಸಿ ಇಡಲಾಗಿದೆ ಎಂಬ ಶಂಕೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಅವರ ಮನೆಯಲ್ಲಿ 18 ಕೋಟಿ ರೂ. ಬೃಹತ್ ಮೊತ್ತದ ಹಣ ಪತ್ತೆಯಾಗಿತ್ತು. ಕೂಡಲೇ ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿತ್ತು.

20 ಜನ ಅಧಿಕಾರಿಗಳು ದತ್ತುನವರ ಮನೆಯಲ್ಲಿ ನಿನ್ನೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಮಶಿನ್ ಮುಖಾಂತರ ಹಣ ಎಣಿಕೆ ಮಾಡಿದ್ದಾರೆ. ಇಂದು ಮಧ್ಯಾಹ್ನದವರೆಗೂ ಅಧಿಕಾರಿಗಳು ತಪಾಸಣೆ ನಡೆಸಿ 18 ಕೋಟಿ ರೂ. ಹಣವನ್ನು 18 ಬ್ಯಾಗ್‌ಗಳಲ್ಲಿ ತುಂಬಿ ಪೊಲೀಸ್ ಭದ್ರತೆ ಮಧ್ಯೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಸಾಗಿಸಿದ್ದಾರೆ.

ಬಸವರಾಜ ದತ್ತುನವರ ತಾನು ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಎಂದು ಹೇಳಿಕೊಂಡಿದ್ದರಿಂದ ಐಟಿ ಅಧಿಕಾರಿಗಳು ಶೆಟ್ಟಿ ಅವರ ಕಚೇರಿ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು.

ಇಂದು ಮಧ್ಯಾಹ್ನ 2 ಗಂಟೆವರೆಗೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿ ಎರಡು ಪೊಲೀಸ್ ಎಸ್ಕಾರ್ಟ್ ವಾಹನದ ಸಮೇತ ಭದ್ರತೆಯೊಂದಿಗೆ 18 ಕೋಟಿ ಹಣವನ್ನು 18 ಬ್ಯಾಗ್‌ಗಳಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ರವಾನಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು