News Karnataka Kannada
Monday, April 29 2024
ಹುಬ್ಬಳ್ಳಿ-ಧಾರವಾಡ

ಯುದ್ಧದ ಸಂದರ್ಭದಲ್ಲಿ ನವೀನ್ ಮೃತದೇಹ ತರುವುದು ಸುಲಭವಲ್ಲ: ಶಾಸಕ ಅರವಿಂದ್ ಬೆಲ್ಲದ್

Aravind Bellad
Photo Credit :

ಧಾರವಾಡ : ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಬಲಿಯಾದ ಕನ್ನಡಿಗ ವಿದ್ಯಾರ್ಥಿ ನವೀನ್ ಮೃತದೇಹ ತರಲು ಪ್ರಯತ್ನ ನಡೆದಿದೆ. ಯುದ್ಧದ ಸಂದರ್ಭದಲ್ಲಿ ಮೃತದೇಹ ತರುವುದು ಸುಲಭವಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ್ ಬೆಲ್ಲದ್, ಜೀವಂತವಾಗಿರುವವರನ್ನೇ ಏರ್ ಲಿಫ್ಟ್ ಮಾಡಲು ಕಷ್ಟವಾಗುತ್ತಿದೆ.
ಸಾಧ್ಯವಾದರೆ ನವೀನ್ ಮೃತದೇಹ ತರಲಾಗುವುದು. ಈ ನಿಟ್ಟಿನಲ್ಲಿ ವಿದೇಶಾಂಗ ಇಲಾಖೆ ಕೂಡ ಪ್ರಯತ್ನ ಮಾಡುತ್ತಿದೆ ಎಂದರು.

ವಿಮಾನದಲ್ಲಿ ಮೃತದೇಹ ತರಲು ಹೆಚ್ಚು ಜಾಗಬೇಕು. ಮೃತದೇಹದ ಜಾಗದಲ್ಲಿ 8-10 ಜನ ಬರಬಹುದು. ಹೀಗಾಗಿ ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ಸ್ಥಳಾಂತರ ಕಾರ್ಯ ಮೊದಲು ನಡೆಯಬೇಕಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು