ಹುಬ್ಬಳ್ಳಿ: ಗೋಕುಲ ರಸ್ತೆಯಲ್ಲಿ ಇಂದು ಬೆಳಗ್ಗೆ ಫರ್ನಿಚರ್ ಫ್ಯಾಕ್ಟರಿಯೊಂದಲ್ಲಿ ಭಾರಿ ಅಗ್ನಿ ಅವಘಡವಾಗಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಟ್ಟಿಗೆ ಮತ್ತು ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.
ಪ್ರಕಾಶ ಇರಕಲ್ ಎಂಬುವವರ ಮಾಲಿಕತ್ವದ ಫರ್ನಿಚರ್ ಗ್ರೇಸ್ ಫ್ಯಾಕ್ಟರಿಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ವಾಚಮನ್ ಕೊಡಲೇ ಮಾಲೀಕರಿಗೆ ಹಾಗೂ ಅಗ್ನಿಶಾಮಕ ಠಾಣೆಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.