ಧಾರವಾಡ : ಕೊರೋನಾ ಸೋಂಕಿಗೆ ಒಳಗಾಗಿರುವಂತ ನಾಡೋಜ ಡಾ.ಚೆನ್ನವೀರ ಕಣವಿಯವರು, ಎಸ್ ಡಿ ಎಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬಹುಬೇಗ ಗುಣಮುಖರಾಗಲಿ ಎಂಬುದಾಗಿ ಸಿಎಂ ಬಸವಾಜ ಬೊಮ್ಮಾಯಿ ಹಾರೈಸಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ನಾಡಿನ ಹಿರಿಯ ಸಾಹಿತಿ, ಕವಿ, ನಾಡೋಜ ಡಾ|| ಚೆನ್ನವೀರ ಕಣವಿ ಅವರು ಉಸಿರಾಟದ ತೊಂದರೆಯಿಂದ ಧಾರವಾಡದ SDM ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತು ಅವರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ.
ನಾಡಿನ ಹಿರಿಯ ಸಾಹಿತಿ, ಕವಿ, ನಾಡೋಜ ಡಾ|| ಚೆನ್ನವೀರ ಕಣವಿ ಅವರು ಉಸಿರಾಟದ ತೊಂದರೆಯಿಂದ ಧಾರವಾಡದ SDM ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತು ಅವರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಡಾ|| ಚೆನ್ನವೀರ ಕಣವಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸುತ್ತೇನೆ. pic.twitter.com/v2vVky003C
— Basavaraj S Bommai (@BSBommai) January 16, 2022
ಡಾ|| ಚೆನ್ನವೀರ ಕಣವಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದಿದ್ದಾರೆ.