News Karnataka Kannada
Tuesday, April 30 2024
ಬೆಂಗಳೂರು ನಗರ

ಸ್ಟಾರ್ಟ್‌ಅಪ್‌ಗಳಿಗೆ ನೀಡುವ ಪ್ರಶಸ್ತಿಯಲ್ಲಿ ಕರ್ನಾಟಕಕ್ಕೆ ಸಿಂಹ ಪಾಲು; ಅಶ್ವಥ್ ನಾರಾಯಣ

Ashwath Narayan
Photo Credit :

ಬೆಂಗಳೂರು (ಜ. 16) : ಸ್ಟಾರ್ಟ್‌ಅಪ್‌ಗಳನ್ನು ನವ ಭಾರತದ ಬೆನ್ನೆಲುಬು ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನ  ಎಂದು ಘೋಷಿಸಿದ್ದಾರೆ. ಈ ಬೆನ್ನಲ್ಲೇ ವಿಧಾನಸೌಧದಲ್ಲಿ ಐಟಿ ಬಿಟಿ ಸಚಿವ ಅಶ್ವಥ್ ನಾರಾಯಣ ಸುದ್ದಿಗೊಷ್ಠಿ ನಡೆಸಿದ್ದು “ದೇಶದಲ್ಲೇ ಅತಿ ಹೆಚ್ಚಿನ ಸಾರ್ಟ್ ಅಪ್ ನಮ್ಮ ರಾಜ್ಯದಲ್ಲಿದೆ.  ಸ್ಟಾರ್ಟ್‌ಅಪ್‌ಗಳಿಗೆ ನೀಡುವ ಪ್ರಶಸ್ತಿಯಲ್ಲಿ ಕರ್ನಾಟಕಕ್ಕೆ ಸಿಂಹ ಪಾಲು” ಎಂದು ಹೇಳಿದ್ದಾರೆ.

ಶನಿವಾರ ವಿವಿಧ ವಲಯಗಳ 150 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳೊಂದಿಗಿ ಮೋದಿ ಸಂವಾದ ನಡೆಸಿದ್ದರು. ಈ ವೇಳೆ ಪ್ರಧಾನಿ ಮೋದಿ ಸ್ಟಾರ್ಟ್‌ಅಪ್ ರಾಜಧಾನಿ ಕರ್ನಾಟಕದ ಪ್ರಶಂಸೆ ವ್ಯಕ್ತಪಡಿಸಿದ್ದರು. “ಸ್ಟಾರ್ಟ್‌ಅಪ್‌ಗಳ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವ ಎಲ್ಲಾ ಸ್ಟಾರ್ಟ್‌ಅಪ್‌ಗಳನ್ನು, ಎಲ್ಲಾ ಯುವಕರನ್ನು ನಾನು ಅಭಿನಂದಿಸುತ್ತೇನೆ. ಸ್ಟಾರ್ಟ್‌ಅಪ್‌ಗಳ ಈ ಸಂಸ್ಕೃತಿಯು ದೇಶದ ದೂರದ ಭಾಗಗಳನ್ನು ತಲುಪಲು, ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ” ಎಂದು ಹೇಳಿದ್ದರು.

ಈ ಬೆನ್ನಲ್ಲೇ ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ “2021 ರಲ್ಲಿ 1060 ಸಾವಿರ ಬಂಡವಾಳ ವಿದೇಶಿದಿಂದ ನಮ್ಮ ರಾಜ್ಯಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ” . ಒಂದು ವಾರದಿಂದ ಸಾರ್ಟ್ ಅಪ್ ಡೇ ಆಚರಣೆ ಮಾಡುತ್ತಿದ್ದೇವೆ. ದೇಶದಲ್ಲೇ ಅತಿ ಹೆಚ್ಚಿನ ಸಾರ್ಟ್ ಅಪ್ ನಮ್ಮ ರಾಜ್ಯದಲ್ಲಿದೆ. ಸ್ಟಾರ್ಟ್‌ಅಪ್‌ಗಳಿಗೆ ನೀಡುವ ಪ್ರಶಸ್ತಿಯಲ್ಲಿ ಕರ್ನಾಟಕಕ್ಕೆ ಸಿಂಹ ಪಾಲು. ರಾಜ್ಯದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆದಿದೆ. ಭಾರತ ವಿಶ್ವ ಗುರು ಅಗಬೇಕು ಎಂದರೆ ಅದಕ್ಕೆ ಸಾರ್ಟ್ ಅಪ್ ಬೆಳವಣಿಗೆ ಬಹಳ ಮುಖ್ಯ ಎಂದು‌ ಮೋದಿ ಹೇಳಿದ್ದಾರೆ” ಎಂದು ಐಟಿ ಬಿಟಿ ಸಚಿವ ಹೇಳಿದ್ದಾರೆ.

“ಎಲಾ ಕ್ಷೇತ್ರದ ಸಾರ್ಟ್‌ಅಪ್ ನಲ್ಲಿ ನಮ್ಮ ರಾಜ್ಯ ಅಗ್ರಮಾನ್ಯದಲ್ಲಿದೆ. ಸಾರ್ಟ್‌ಅಪ್ ಪ್ರೋತ್ಸಾಹಿಸಲು ಕರ್ನಾಟಕ ಸೀಡ್ ಫಂಡ್ ಯೋಜನೆ ಜಾರಿಮಾಡಿದ್ದೇವೆ. ಈಗಾಗಲೇ 200 ಕ್ಕಿಂತ ಹೆಚ್ಚು ಸಾರ್ಟ್‌ಅಪ್‌ಗಳಿಗೆ ಸೀಟ್ ಫಂಡ್‌ ನೀಡಲಾಗುತ್ತಿದೆ. ಇದುವರೆಗೂ 50 ಲಕ್ಷದವರೆಗೂ ನಾವು ಸೀಡ್ ಫಂಡ್ ನೀಡಲಾಗಿದೆ” ಅಶ್ವತ್ಥ್‌ ನಾರಾಯಣ್‌ ತಿಳಿಸಿದ್ದಾರೆ.

“ಇಡಿ ದೇಶದಲ್ಲಿ 57 ಸಾವಿರ ಸಾರ್ಟ್ ಅಪ್ ಗಳಿವೆ‌. ಅವುಗಳಲ್ಲಿ 13 ಸಾವಿರ ಸಾರ್ಟ್ ಅಪ್ ಕರ್ನಾಟಕದಲ್ಲೇ ಆರಂಭಿಸಲಾಗಿದೆ.
7 ವಿಶ್ವವಿದ್ಯಾಲಯಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಜತೆಗೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಡಿಜಿಟಲ್ ಲರ್ನಿಂಗ್ ಸಹ ಭೋದಿಸಲಾಗ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಾಗ್ತಿದೆ. ಇದಕ್ಕಾಗಿ ಸಾಕಷ್ಟು ಸುಧಾರಣೆ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ. ಕರ್ನಾಟಕಕ್ಕೆ ಬೇರೆ ರಾಜ್ಯ ಹಾಗೂ ದೇಶಗಳಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರಬೇಕು ಎಂಬ ಧ್ಯೇಯದ ಜತೆಗೆನ ಕೆಲಸ ಮಾಡುತ್ತಿದ್ಧೆವೆ. ಕರ್ನಾಟಕ ಎಂದರೆ ಒಳ್ಳೆಯ ಶಿಕ್ಷಣ ಸಿಗಲಿದೆ ಎಂದು ವಿಶ್ವವೇ ತಿರುಗಿ ನೋಡಬೇಕು ಆ ರೀತಿ ಸುಧಾರಣೆ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು