ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್, ಅಕ್ಟೋಬರ್ 28, 29 ಮತ್ತು 30 ರಂದು ಧಾರವಾಡದ ಹೊರವಲಯದಲ್ಲಿರುವ ಗರಗದ ಮಾಧವ ನಗರದಲ್ಲಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆಯಲಿದೆ.
ಬೈಠಕ್ ನಲ್ಲಿ ಆರ್ ಎಸ್ಎಸ್ ನ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಮತ್ತು ಮಾ. ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಜೊತೆಗೆ ಅಖಿಲ ಭಾರತೀಯ, ಕ್ಷೇತ್ರೀಯ ಮತ್ತು ಪ್ರಾಂತ ಸ್ತರದ ಕಾರ್ಯಕರ್ತರು ಈ ಬೈಠಕನಲ್ಲಿ ಭಾಗವಹಿಸಲಿದ್ದಾರೆ.
ದೇಶದೆಲ್ಲಕಡೆಗಳಿಂದ ಸುಮಾರು 350 ಪ್ರತಿನಿಧಿಗಳು ಈ ಬೈಠಕನಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್ ತಿಂಗಳಲ್ಲಿ ನಡೆಯುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಸಂಘವು ಯೋಜನೆಯನ್ನು ರೂಪಿಸುತ್ತದೆ.
ಇದಾದ 6 ತಿಂಗಳ ನಂತರ ನಡೆಯುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳ ಬೈಠಕ್ ಇದರ ಪರಿಶೀಲನಾ ಸಭೆಯಾಗಿದ್ದು, ವಿಸ್ತರಣೆಯ ಯೋಜನೆಗಳು, ಕಾರ್ಯಕರ್ತರ ತರಬೇತಿ ಮತ್ತು ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.